ಗುರುವಾರ , ಫೆಬ್ರವರಿ 20, 2020
20 °C
ಶ್ರೀಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ಉದ್ಘಾಟನೆ

‘ಬಡವರಿಗೆ ಆರ್ಥಿಕ ಸಹಾಯ ಒದಗಿಸಿ’: ಮಾಜಿ ಸಚಿವ ರಾಜಾಮದನ ಗೋಪಾಲ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬ್ಯಾಂಕ್‍ಗಳು ಸಕಾಲಕ್ಕೆ ಸಾಲ ಸೌಲಭ್ಯ ನೀಡದ ಕಾರಣ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಯೋಗ್ಯ ಬಡ್ಡಿ ದರದಲ್ಲಿ ಸಾಲಭ್ಯ ಕಲ್ಪಿಸಲು ಶ್ರೀಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮುಂದಾಗಬೇಕು’ ಎಂದು ಮಾಜಿ ಸಚಿವ ರಾಜಾಮದನ ಗೋಪಾಲ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ಯಾಂಕ್‍ಗಳಿಂದ ಸಾಲ ಕೇಳಿದಾಗ ಆಗ ಕೊಡುತ್ತೇನೆ ಈಗ ಕೊಡುತ್ತೇನೆ ಎಂದು ಅಲೆದಾಡಿಸಿ ಬೇಡವಾದ ಸಮಯದಲ್ಲಿ ಸಾಲ ನೀಡುತ್ತಾರೆ. ಅಗತ್ಯವಾಗಿದ್ದಾಗ ಸಾಲ ಕೇಳಿದಾಗ ನೀಡಬೇಕು’ ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸಿದ್ರಾಮರೆಡ್ಡಿ ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಕ್ಷೇತ್ರದಿಂದ ಮಾತ್ರ ಅರ್ಥಿಕ ಅಭಿವೃದ್ಧಿ ಸಾಧ್ಯ’ ಎಂದರು.

ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ. ಸುರೇಶ ಸಜ್ಜನ್ ,ಅಧ್ಯಕ್ಷತೆ ವಹಿಸಿದ್ದ ಮುಖ್ಯ ಪ್ರವರ್ತಕ ರಾಜಾ ಮುಕುಂದನಾಯಕ ಮಾತನಾಡಿದರು.

ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್ ಮಾತನಾಡಿ, ‘ಈ ಭಾಗವೂ ನೀರಾವರಿಗೆ ಒಳಪಟ್ಟಿದ್ದು, ಸಹಕಾರ ಸಂಘದಿಂದ ರೈತರು-ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು. ಕೆನರಾ ಬ್ಯಾಂಕ್ ಅಧಿಕಾರಿ ತಿರುಪತಿ ಪೂಜಾರಿ ಮಾತನಾಡಿದರು.

ಬೆಳಿಗ್ಗೆ ಶ್ರೀಕೃಷ್ಣ ಪಟ್ಟಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಘವನ್ನು ವೀರಘಟ್ಟ ಅಡವಿಲಿಂಗ ಮಹಾರಾಜರು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಬಸವರಾಜ ಬೂದಿಹಾಳ, ಬಸವರಾಜ ಹೂಗಾರ, ದತ್ತಾತ್ರೇಯ ಗುತ್ತೇದಾರ, ಭೀಮರಾವ ರಪುಗಾರ, ಚನ್ನಬಸವ ಬಾರಿ, ದೇವದಾನ ಡೀನ್, ಪಾರಪ್ಪ ಗುತ್ತೇದಾರ, ಸಂಗಮನಾಥ ಗುಳಗಿ, ವಸುದೇವ ಜೋಷಿ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು