ಯಾದಗಿರಿ: ನಗರದಲ್ಲಿ ಒಂದು ಕಾಲದಲ್ಲಿ 12ಕ್ಕೂ ಹೆಚ್ಚು ಬೀಡಿ ಕಾರ್ಖಾನೆಗಳಿದ್ದವು. ಈಗ ಅವು ಮುಚ್ಚಿದ್ದು, ಒಂದೆರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬೀಡಿ ಸುತ್ತುವ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಒಂದು ಬೀಡಿ ಕಟ್ಟಿನಲ್ಲಿ 24 ಬೀಡಿಗಳು ಇರುತ್ತವೆ. ಒಬ್ಬೊಬ್ಬರು ಸಾವಿರ ಬೀಡಿ ಸುತ್ತುತ್ತಾರೆ. ಪ್ರತಿದಿನ ಮಧ್ಯಾಹ್ನ 1ಕ್ಕೆ ಕಾರ್ಖಾನೆಗೆ ಕೊಟ್ಟು ಬರುತ್ತಾರೆ. ಕೆಲ ಸಂದರ್ಭಗಳಲ್ಲಿ ಕಾರ್ಖಾನೆಯವರು ಬೀಡಿ ತೆಗೆದುಕೊಳ್ಳುವುದಿಲ್ಲ. ಆಗ ಕಾರ್ಮಿಕರ ಶ್ರಮವೆಲ್ಲ ವ್ಯರ್ಥವಾಗುತ್ತದೆ.

ಬೀಡಿ ಸಿದ್ಧಪಡಿಸಲು ದಾರ, ಒಂದು ಕಡ್ಡಿ, ತಂಬಾಕು ಪುಡಿ ಮತ್ತು ಎಲೆ ಬೇಕು. 1 ಸಾವಿರ ಬೀಡಿ ಸುತ್ತಿದರೆ ₹ 120ರವರೆಗೆ ದಿನಗೂಲಿ ಸಿಗುತ್ತದೆ. ಪ್ರತಿ ಶುಕ್ರವಾರ ರಜೆಯಿದ್ದು, ಶನಿವಾರ ಕೂಲಿ ಹಣ ಸಿಗುತ್ತದೆ. ಪುರುಷರು ಎಲೆ ಕತ್ತರಿಸಿದರೆ, ಮಹಿಳೆಯರು ಬೀಡಿ ಸುತ್ತುತ್ತಾರೆ. ಪ್ರತಿದಿನ ಕಟ್ಟಿದರೆ ಕೂಲಿ. ಇಲ್ಲದಿದ್ದರೆ ಕೂಲಿ ಸಿಗುವುದಿಲ್ಲ’ ಎಂದು ಕಾರ್ಮಿಕರು ಹೇಳುತ್ತಾರೆ.

‘ಸರ್ಕಾರದಿಂದಬೀಡಿ ಸುತ್ತುವ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಆದರೂ ಕಾಯಕ ಮುಂದುವರೆಸಿದ್ದೇವೆ’ ಎನ್ನುತ್ತಾರೆ ಕಾರ್ಮಿಕ ಮಹಮ್ಮದ್ ಇಕ್ಬಾಲ್.

‘ಬೀಡಿ ಕಾರ್ಮಿಕರಿಗೆಸಾವಿರ ಬೀಡಿ ಸುತ್ತಿದರೆ ₹224 ದಿನಗೂಲಿ ನೀಡಬೇಕು. ಆದರೆ, ನಗರದಲ್ಲಿ ₹110 ರಿಂದ ₹120 ನೀಡಲಾಗುತ್ತಿದೆ. ಇದರಿಂದ ಕಾರ್ಮಿಕರು ತಮ್ಮ ಶ್ರಮಕ್ಕೆ ತಕ್ಕಂತೆ ಕೂಲಿ ಪಡೆಯುತ್ತಿಲ್ಲ. ಹೆಚ್ಚು ಒತ್ತಡ ಹಾಕಿ ಕೇಳಲು ಕಾರ್ಮಿಕರಿಗೆ ಆಗುತ್ತಿಲ್ಲ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಾಲೀಕರೆ ಏಜೆಂಟ್:

ಬೀಡಿ ಕಾರ್ಖಾನೆಗಳು ಬಂದ್ ಆಗಿರುವ ಕಾರಣ ಮಾಲೀಕರೇ ಕಮಿಷನ್ ಎಜೆಂಟರಾಗಿದ್ದಾರೆ. ಇದರಿಂದ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಬೋನಸ್ ಇಲ್ಲ, ಕಾಯಂ ಕೆಲಸ ಇಲ್ಲ. ಚಿಕಿತ್ಸೆ ಪಡೆಯಲು ಬೀಡಿ ಕಾರ್ಮಿಕ ಆಸ್ಪತ್ರೆ ಇದೆ. ಕೆಲವರಿಗೆ ಕಾರ್ಡ್ ಇದೆ. ಇನ್ನೂ ಕೆಲವರಿಗೆ ಇಲ್ಲ.

ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡ ಬೀಡಿ ಕಾರ್ಮಿಕರಿಲ್ಲ. ಮನೆಗಳಲ್ಲಿ ಬೀಡಿ ಸುತ್ತುವ ಕೆಲಸ ಮಾಡುತ್ತಾರೆ. ಹೀಗಾಗಿ ಅವರಿಗೆ ಯಾವ ಸೌಲಭ್ಯವೂ ಇಲ್ಲದಾಗಿದೆ
-ಶ್ರೀಹರಿ ದೇಶಪಾಂಡೆ, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ

ಭಾರತ್ ಬೀಡಿ ಕಾರ್ಖಾನೆಯಲ್ಲಿ 34 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 3–4 ವರ್ಷಗಳ ಹಿಂದೆ ಬೀಡಿ ಕಾರ್ಮಿಕ ಸಮೀಕ್ಷೆ ಆಗಿತ್ತು. ಉತ್ಪಾದನೆ ಇಲ್ಲದ ಕಾರಣ ಕಾರ್ಖಾನೆಗಳು ಬಂದ್ ಆಗಿವೆ
-ಶಿವಶಂಕರಪ್ಪ ತಳವಾರ, ಕಾರ್ಮಿಕ ನಿರೀಕ್ಷಕ

ನಮ್ಮ ಶ್ರಮಕ್ಕೆ ತಕ್ಕಂತೆ ಹಣ ನೀಡುತ್ತಿಲ್ಲ. ಆದರೆ, ಜೀವನ ಸಾಗಿಸಲು ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಎಲೆ ಹಾಳಾದರೂ ನಮಗೆ ನಷ್ಟ ಆಗುತ್ತದೆ
-ಸುಲ್ತಾನ್ ಬೇಗಂ ಅನ್ವರ್ ಹುಸೇನ್, ಬೀಡಿ ಸುತ್ತುವ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.