ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಜಲಿಂಗೇಶ್ವರ ರಥೋತ್ಸವ ಸಂಭ್ರಮ

ಮೊಳಗಿದ ಜೈಕಾರ, ಗಮನ ಸೆಳೆದ ಪಲ್ಲಕ್ಕಿ ಮೆರವಣಿಗೆ, ಮದ್ದು ಸುಡುವ ಕಾರ್ಯಕ್ರಮ
Last Updated 2 ಮಾರ್ಚ್ 2020, 9:46 IST
ಅಕ್ಷರ ಗಾತ್ರ

ಯಾದಗಿರಿ: ಸುಕ್ಷೇತ್ರ ಸೂಗೂರು (ಎನ್) ಭೋಜಲಿಂಗೇಶ್ವರ ಸಿದ್ಧಿ ಸಂಸ್ಥಾನ ಮಠದಲ್ಲಿ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತಾನವರ ನೇತೃತ್ವದಲ್ಲಿ ಭೋಜಲಿಂಗೇಶ್ವರರ ರಥೋತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.

ಜಾತ್ರೆ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುರವಂತರು ಸೇವೆ ನಡೆಸಿಕೊಟ್ಟರು. ಹಲಗೆ, ಭಾಜಾ-ಭಜಂತ್ರಿ, ಡೊಳ್ಳು ಮುಂತಾದ ವಾದ್ಯಗಳ ಸದ್ದು ಭಕ್ತರ ಸಡಗರ, ಸಂಭ್ರಮ ಇಮ್ಮಡಿಗೊಳಿಸಿತು.

ರಥೋತ್ಸವದ ಮುಂಚೆ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ಪೀಠಾಧಿಪತಿ ಹಿರಗಪ್ಪ ತಾತನವರು ಮಹಾ ರುಧ್ರಾಭಿಶೇಕ, ಮಹಾ ಮಂಗಳಾರತಿ, ವಿಶೇಷ ಪೂಜೆ ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹೂವುಗಳಿಂದ ಅಲಂಕರಿಸಿದ್ದ ರಥವನ್ನು ಭಕ್ತರು ‘ಭೋಜಲಿಂಗೇಶ್ವರ ಮಹಾರಾಜಕೀ ಜೈ’ ಎಂಬ ಜೈಕಾರ ಹಾಕುತ್ತ ಎಳೆದರು. ರಥದ ಮೇಲೆ ಭಕ್ತರು ಫಲ, ಪುಷ್ಪಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ಭೋಜಲಿಂಗೇಶ್ವರರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಶಿವ ಕೀರ್ತನೆಯೊಂದಿಗೆ ಆರಂಭವಾಗಿದ್ದವು. ರಾತ್ರಿ 10 ಗಂಟೆಗೆ ದಾವಲ್ ಮಲ್ಲಿಕ್ ದರ್ಗಾಕ್ಕೆ ಗಂಧ ಮೆರವಣಿಗೆ ನಡೆಸಲಾಯಿತು.

ಶುಕ್ರವಾರ ಬೆಳಿಗ್ಗೆ ಭೋಜಲಿಂಗೇಶ್ವರರ 28ನೇ ಪುಣ್ಯಾರಾಧನೆ, ಶನಿವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಮುಂಬೈ ಉದ್ಯಮಿ ಲಾಲಶೇಠ್ ಅವರ ತಂಡದಿಂದಭಾನುವಾರ ಸಂಜೆ ಮದ್ದು ಸುಡುವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ನಂತರ ರಾತ್ರಿ 8 ಗಂಟೆಗೆ ಧರ್ಮ ಸಭೆಯು ಪೀಠಾಧಿಪತಿ ಹಿರಗಪ್ಪ ತಾತನವರ ಅಧ್ಯಕ್ಷತೆಯಲ್ಲಿ ಜರುಗಿತು.ಜಮಖಂಡಿಯ ಓಲೇಮಠದ ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಹಾಗೂ ಶಹಾಪುರದ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT