ಗುರುವಾರ , ಸೆಪ್ಟೆಂಬರ್ 23, 2021
23 °C

ಶಹಾಪುರ: 12 ಬೈಕ್ ಕಳ್ಳತನ, ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ವಿವಿಧ ಕಡೆ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಶಹಾಪುರ ಠಾಣೆಯ ಪೊಲೀಸರು ಬಂಧಿಸಿ 12 ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದರು.

ತಾಲ್ಲೂಕಿನ ರಸ್ತಾಪುರ ಗ್ರಾಮದ ಸಂತೋಷ ಅರಿಕೇರಿ, ಶರಬಣ್ಣ ಮಡಿವಾಳ ಬಂಧಿತ ಆರೋಪಿಗಳಾಗಿದ್ದಾರೆ.

ನಗರದಲ್ಲಿ ಗಂಜ್ ಏರಿಯಾದ ಹತ್ತಿರ ಮಂಗಳವಾರ ಬೆಳಗಿನ ಜಾವ ಇಬ್ಬರು ಯುವಕರು ದ್ವಿಚಕ್ರ ವಾಹನದ ಮೇಲೆ ಅನುಮಾನಸ್ಪದ ತಿರುಗಾಡುತ್ತಿದ್ದರು. ನಮ್ಮ ಸಿಬ್ಬಂದಿ ಅನುಮಾನಗೊಂಡು ಇಬ್ಬರನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ, ಆರೋಪಿಗಳು ಶಹಾಪುರ ನಗರ, ರಸ್ತಾಪುರ, ನರೋನಾ, ಆಳಂದ, ಕವಿತಾಳ, ಕೆಂಭಾವಿ ಸೇರಿದಂತೆ ವಿವಿಧ ಕಡೆ ₹5 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅತ್ಯಂತ ಚಾಲಕಿತನದಿಂದ ಕಳುವು ಮಾಡುತ್ತಿದ್ದ ಇವರು, ವಾಹನ ಕದ್ದ ಮೇಲೆ ಎಂಜಿನ್ ಬದಲಾಯಿಸಿ ವಾಹನ ಓಡಿಸುವುದು ಹ್ಯಾಂಡ್ಲಾಕ್ ಆಗಿದ್ದ ವಾಹನಗಳನ್ನು ಕಾಲಿನಿಂದ ಹೊಡೆದರೆ ಸಾಕು ಲಾಕ್ ಓಪನ್ ಆಗುವತರಹ ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದರು. ವಾಹನ ಸವಾರರು ಮುಂದೆ ವೀಲ್ ಲಾಕ್, ಚೈನ್ ಲಾಕ್ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪೊಲೀಸ್ ಇನ್ಸಪೆಕ್ಟರ್ ಚೆನ್ನಯ್ಯ ಹಿರೇಮಠ, ಪಿಎಸ್ಐ ಹಣಮಂತ ಮುಂಡ್ರಗಿ, ಹಣಮಂತ ಬಂಕಲಗಿ, ಶ್ಯಾಮ್ ಸುಂದರ್ ನಾಯಕ, ಬಾಬು, ಸತೀಶ್ ನರಸನಾಯಕ್, ಭೀಮಣಗೌಡ, ಸಿದ್ರಾಮಯ್ಯ ಸ್ವಾಮಿ, ಹೊನ್ನಪ್ಪ , ನಾರಾಯಣ, ಗೋಕುಲ್, ಭಾಗಣ್ಣ, ಹಣಮಂತ, ದೇವು, ಲಕ್ಕಪ್ಪ, ದೇವರಾಜ, ಶರಣು ರಾಂಪೂರ್, ಬಸವರಾಜ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು