ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳ ಬಂಡಾರ ಹಚ್ಚಿದ ಗಂಗಾಧರನಾಯಕ

ಮಾದರಿ ಗ್ರಂಥಾಲಯ ನಿರ್ಮಾಣ, ಸದಸ್ಯತ್ವ ಹೆಚ್ಚಿಸಲು ಶ್ರಮ
Last Updated 21 ಡಿಸೆಂಬರ್ 2019, 15:30 IST
ಅಕ್ಷರ ಗಾತ್ರ

ಕಕ್ಕೇರಾ: ದುಡಿಯಲು ಛಲ ಇರಬೇಕು. ಮಾಡುವ ಕೆಲಸದಲ್ಲಿಶೃದ್ಧೆ ಇದ್ದರೆಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದಕ್ಕೆ ತಿಂಥಣಿಯ ಗ್ರಂಥಾಲಯ ಮೇಲ್ವಿಚಾರಕ ಗಂಗಾಧರನಾಯಕ ಅವರೇ ಸಾಕ್ಷಿ.

ಚಿಕ್ಕಗ್ರಾಮದಲ್ಲಿ ಓದುಗರಿಗೆ ಉತ್ತಮ ಪುಸ್ತಕಗಳನ್ನು ಸಂಗ್ರಹಿಸಿ ಮಾದರಿಗ್ರಂಥಾಲಯವನ್ನಾಗಿಸಿಸಿಬ್ಬಂದಿ ಸೇವಾ ಪುರಸ್ಕಾರಪಡೆದಿದ್ದಾರೆ.ತಿಂಥಣಿಯಲ್ಲಿ ಇರುವ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹ, ಓದುಗರ ಸದಸ್ಯತ್ವ ಹೆಚ್ಚಿಸಿ ಗ್ರಂಥಾಲಯದ ಪ್ರಗತಿಗೆ ಶ್ರಮಿಸಿದ್ದಾರೆ. ಹೋರಾಟ, ಸಾಂಸ್ಕೃತಿಕ, ಸಮಾಜ ಸೇವೆ ಹೀಗೆಹತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ನನ್ನ ಸೇವೆ ಗುರುತಿಸಿ ಚಾಮರಾಜನಗರದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ 'ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿ' ನೀಡಿ ಗೌರವಿಸಿದ್ದು ಸೇವೆಗೆ ಸಿಕ್ಕ ಗೌರವವಾಗಿದೆ’ ಎನ್ನುತ್ತಾರೆ ಗಂಗಾಧರನಾಯಕ ಅವರು.

ಗ್ರಂಥಾಲಯ ಸೇವೆ ಅಲ್ಲದೆ ಕರ್ನಾಟಕ ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯಿಂದ ಮಕ್ಕಳಿಗೆ ವಿವಿಧ ಕ್ರೀಡಾ ತರಬೇತಿ, ಪ್ರೋತ್ಸಾಹ ಹಾಗೂ ಕ್ರೀಡಾ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT