ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾರಾಯಣಪುರ | ಬಸ್‌ ತಂಗುದಾಣದ ಮೇಲ್ಚಾವಣಿ ಕುಸಿತ

Published 23 ಜೂನ್ 2024, 16:27 IST
Last Updated 23 ಜೂನ್ 2024, 16:27 IST
ಅಕ್ಷರ ಗಾತ್ರ

ನಾರಾಯಣಪುರ: ಈಚೆಗೆ ಸುರಿದ ಮಳೆಗೆ ರಾಯನಗೋಳ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಸ್ ತಂಗುದಾಣದ ಮೇಲ್ಚಾವಣೆ ಕುಸಿದು ಬಿದ್ದಿದೆ.

ವಿಶ್ವ ಆಹಾರ ಯೋಜನೆ ಅಡಿ ಹಲವು ದಶಕಗಳ ಹಿಂದೆ ನಿರ್ಮಿಸಲಾದ ಬಸ್ ಸೆಲ್ಟರ್ ಗ್ರಾಮ ಸೇರಿ ಹತ್ತಿರದ ಗ್ರಾಮಗಳ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಆಸರೆಯಾಗಿತ್ತು.

ನಿರ್ವಹಣೆ ಕೊರೆತೆಯಿಂದಾಗಿ ಸದ್ಯ ತಂಗುದಾಣದ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಚಾವಣೆ ಕುಸಿದು ಬಿದ್ದಿದಕ್ಕೆ ಮಳೆ, ಬಿಸಿಲಿನ ಸಂದರ್ಭದಲ್ಲಿ ರಕ್ಷಿಸಿಕೊಳ್ಳಲು ಪ್ರಯಾಣಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಹೀಗಾಗಿ ಸಂಬಂಧಪಟ್ಟವರು ಹಳೆ ಬಸ್ ತಂಗುದಾಣದ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಕರವೇ ರಾಯನಗೋಳ ಗ್ರಾಮ ಘಟಕದ ಅಧ್ಯಕ್ಷ ಶಿವರಾಜ ಮಿಂಚೇರಿ ಸೇರಿ ಇತರೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT