ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ಕಾರಹುಣ್ಣಿಮೆ: ರೈತರಿಂದ ಖರೀದಿ ಜೋರು

Last Updated 5 ಜೂನ್ 2020, 4:44 IST
ಅಕ್ಷರ ಗಾತ್ರ

ಶಹಾಪುರ: ರೈತರು ಕೊರೊನಾ ವೈರಸ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕಾರಹುಣ್ಣಿಮೆಯಂದು ಎತ್ತುಗಳನ್ನು ಸಿಂಗರಿಸಲು ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಪಟ್ಟಣದಲ್ಲಿ ಬುಧವಾರ ಕಂಡುಬಂತು.

ಹಳಸಗರ ರಸ್ತೆಗೆ ಹೊಂದಿಕೊಂಡು ಹಾಕಿದ್ದ ಅಂಗಡಿಗೆ ಭೇಟಿ ನೀಡಿದ ರೈತರು ಆಲಂಕಾರಿಕ ವಸ್ತುಗಳನ್ನು ಕೊಂಡರು. 1 ಜೊತೆ ಎತ್ತುಗಳ ಬಾಸಿಂಗಕ್ಕೆ ₹200, ಮಗಡ ₹100, ಹಗ್ಗ ₹150,₹ದಾಂಡ 60, ಗೆಜ್ಜೆ ₹1050, ಕುರನಿ ₹50 ಅಲ್ಲದೆ ಗುಲಾಬಿ, ಹಸಿರು ಬಣ್ಣಗಳನ್ನು ಎತ್ತುಗಳ ಶೃಂಗಾರಕ್ಕಾಗಿ ಖರೀದಿಸಿದೆವು ಎಂದರು ರೈತ ಈರಪ್ಪ.

ಬಿತ್ತನೆಗೆ ರೋಹಿಣಿ ಮಳೆಯು ಪೂರಕವಾಗಿದೆ. ಮೂರು ದಿನದ ಹಿಂದೆ ಸುರಿದ ಮಳೆಯು ನೆಮ್ಮದಿ ಮೂಡಿಸಿದೆ. ಇನ್ನೊಂದು ಹದಭರಿತ ಮಳೆಯಾದರೆ ಸಾಕು ಹೆಸರು ಬೀಜ ಬಿತ್ತನೆ ಮಾಡುತ್ತೇವೆ. ಪ್ರಸಕ್ತ ಬಾರಿ ಉತ್ತಮ ಮುಂಗಾರು ಮಳೆ ಬರುವ ನಿರೀಕ್ಷೆಯಲ್ಲಿ ಇದ್ದೇವೆ. ಕೃಷಿ ಚಟುವಟಿಕೆಯಲ್ಲಿ ನಾವು ತೊಡಗುವುದರಿಂದ ಕೊರೊನಾ ವೈರಸ್ ಚಿಂತೆಯಿಂದ ದೂರ ಉಳಿಯುತ್ತೇವೆ. ರೋಗದ ಜೊತೆಯಲ್ಲಿ ಜೀವ ಹಾಗೂ ಜೀವನ ಮುನ್ನಡೆಸುತ್ತೇವೆ ಎಂಬುದು ರೈತರ ಆಶಾವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT