ಶನಿವಾರ, ಅಕ್ಟೋಬರ್ 19, 2019
28 °C

ಸಿಎಂ ಪ್ರವಾಸದ ವೇಳೆ ಜೆಡಿಎಸ್‌ಗೆ ಜೈಕಾರ: ಶರಣಗೌಡ ಸೇರಿ ಹಲವರ ವಿರುದ್ಧ ಕೇಸು

Published:
Updated:

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ಜಿಲ್ಲೆಯ ಪ್ರವಾಸ ಕೈಗೊಂಡು ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದ ವೇಳೆ ನಗರದ ಸುಭಾಷ್‌ ವೃತ್ತದಲ್ಲಿ ಜೆಡಿಎಸ್‌ಗೆ ಜೈ ಎಂದು ಕೂಗಿ ಭದ್ರತೆಗೆ ಅಡ್ಡಿಪಡಿಸಿದ ಆರೋಪದ ಮೇಲೆ 15ರಿಂದ 20 ಮಂದಿ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೆಡಿಎಸ್‌ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಅವರ ಒಳಸಂಚಿನಿಂದ ಶಿವ ಕುಮಾರ್ ಹಾಗೂ ಇತರರು ಮುಖ್ಯಮಂತ್ರಿಯವರ ಭದ್ರತೆಗೆ ಅಡ್ಡಿಪಡಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಗರಸಭೆ ಸದಸ್ಯ ಹನಮಂತ್ ಇಟಗಿ ದೂರು ನೀಡಿದ್ದರು. ‘ಶರಣಗೌಡ ಕಂದಕೂರ ಹಾಗೂ ಶಿವಕುಮಾರ್ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

 

Post Comments (+)