ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕರು ಸಾವು, ಚಿರತೆ ದಾಳಿ ಶಂಕೆ

Last Updated 29 ನವೆಂಬರ್ 2021, 7:21 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಚಿರತೆ ದಾಳಿ ಮಾಡಿ, ಒಂದು ವರ್ಷದ ಆಕಳ ಕರುವನ್ನು ಬಲಿ ಪಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಲ್ಲಪ್ಪ ಗುಡ್ಡೇರ್‌ ಅವರಿಗೆ ಸೇರಿದ ಕರುವನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿದೆ ಎಂದು ಗ್ರಾಮಸ್ಥ ಗುರು ಮೈಲಾಪುರ ತಿಳಿಸಿದ್ದಾರೆ.

ಜಮೀನನಲ್ಲಿ 10–12 ಆಕಳುಗಳಿದ್ದು, ಅದರಲ್ಲಿ ಒಂದು ಕರುವನ್ನು ಚಿರತೆ ಹೊತ್ತಿಯ್ದಿದೆ. ಕರುವಿನ ಒಂದು ಭಾಗವನ್ನು ತಿಂದು ಹಾಕಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

‘ಗ್ರಾಮದಲ್ಲಿ 6 ತಿಂಗಳಿಂದಲೂ ಚಿರತೆ ಕಾಟವಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿವೇಳೆ ತೋಟಗಳಿಗೆ ನೀರು ಹರಿಸಲು ಗ್ರಾಮಸ್ಥರು ಭಯಪಡುವಂತಾಗಿದೆ. ಕಳೆದ ಬಾರಿ ಎಮ್ಮೆ, ನಾಯಿಯನ್ನು ಚಿರತೆ ಬಲಿ ಪಡೆದಿತ್ತು. ಪಿಡಿಒ ಸೇರಿದಂತೆ ಅಧಿಕಾರಿಗಳು ಬಂದು ಹೋಗಿದ್ದರು. ಮತ್ತೆ ಈಗ ಚಿರತೆ ಭಯ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ’ ಎಂದು ಗ್ರಾಮದ ನಿವಾಸಿಗಳು ತಿಳಿಸಿದರು.

ಈ ಬಗ್ಗೆ ಮಾಹಿತಿ ಪಡೆಯಲು ಅರಣ್ಯ ಪ್ರಾದೇಶಿಕ ಉಪ ಸಂರಕ್ಷಣಾಧಿಕಾರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT