ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಾಲಕಾರ್ಮಿಕ ಪದ್ದತಿ ಅನಿಷ್ಟ ಪಿಡುಗು’

Published 19 ಜೂನ್ 2024, 15:42 IST
Last Updated 19 ಜೂನ್ 2024, 15:42 IST
ಅಕ್ಷರ ಗಾತ್ರ

ಸುರಪುರ: ‘ಬಾಲ ಕಾರ್ಮಿಕ ಪದ್ದತಿ ಸಾಮಾಜಿಕ ಪಿಡುಗು. ಇದರ ನಿಯಂತ್ರಣಕ್ಕೆ ವಿಶೇಷ ಕಾನೂನುಗಳಿವೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ತಡೆಗಟ್ಟಲಾಗುತ್ತಿಲ್ಲ’ ಎಂದು ನ್ಯಾಯಾಧೀಶ ಕೆ. ಮಾರುತಿ ವಿಷಾದಿಸಿದರು.

ನಗರದ ದರ್ಬಾರ ಶಾಲೆಯಲ್ಲಿ ಕಂದಾಯ, ಶಿಕ್ಷಣ, ಪೊಲೀಸ್, ಮಹಿಳಾ ಮಕ್ಕಳ ಕಲ್ಯಾಣ, ಶಿಶು ಅಭಿವೃದ್ಧಿ ಇಲಾಖೆ, ತಾಲ್ಲೂಕು ಪಂಚಾಯಿತಿ, ವಕೀಲರ ಸಂಘ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಕಾನೂನಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದಲ್ಲಿ ಜಾಗೃತಿ ಮೂಡಿದಾಗ ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಬಾಲಕಾರ್ಮಿಕ ಪದ್ದತಿ ಕುರಿತು ಮಾತನಾಡಿದ ಯಾದಗಿರಿಯ ಉಪನ್ಯಾಸಕ ಗುರುರುಪ್ರಸಾದ ವೈದ್ಯ, ‘ಬಾಲಕಾರ್ಮಿಕ ಪದ್ಧತಿ ಅನಿಷ್ಟವಾದದ್ದು. ಇದರ ನಿರ್ಮೂಲನೆಗೆ ಪ್ರತಿಯೊಬ್ಬರು ಪಣತೊಡಬೇಕು’ ಎಂದರು.

ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ತಹಶೀಲ್ದಾರ್ ಕೆ. ವಿಜಯಕುಮಾರ, ತಾ.ಪಂ ಇಒ ಬಸವರಾಜ ಸಜ್ಜನ್, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಎಪಿಪಿ ಸುರೇಶ ಪಾಟೀಲ, ಎಜಿಪಿ ಎನ್‍ಎಸ್, ಪಾಟೀಲ, ಮಲ್ಲಿಕಾರ್ಜುನ ಮಂಗ್ಯಾಳ, ಬಿಇಒ ಬಸವರಾಜ, ಸಮಾಜ ಕಲ್ಯಾಣ ಇಲಾಖೆಯ ಡಾ. ಎಂ. ಶೃತಿ, ಕಾರ್ಮಿಕ ಅಧಿಕಾರಿ ಗಂಗಾಧರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ ವರ್ಕನಳ್ಳಿ, ಸಿಡಿಪಿಒ ಅನಿಲ ಕಾಂಬಳೆ, ಆರೋಗ್ಯ ಇಲಾಖೆಯ ಸಂಗಪ್ಪ ಚೆಟ್ಟಿ, ಶಾಲೆಯ ಪ್ರಧಾನಗುರು ಸೋಮರೆಡ್ಡಿ ಮಂಗ್ಯಾಳ ಇತರರು ಭಾಗವಹಿಸಿದ್ದರು.

ವಕೀಲ ಎಂ.ಎಸ್. ಹಿರೇಮಠ ಕಾನೂನು ಅರಿವು ನೆರವು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಿಂದ ಗಾಂಧಿವೃತ್ತದವರೆಗೆ ಬಾಲಕಾರ್ಮಿಕ ವಿರೋಧಿ ಹಾಗೂ ನಿರ್ಮೂಲನಾ ಜಾಥಾ ನಡೆಯಿತು. 12 ಶಾಲೆಗಳ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT