ಶುಕ್ರವಾರ, ಮೇ 27, 2022
21 °C
ಅಯ್ಯಣ್ಣ ಕನ್ಯಾಕೊಳ್ಳುರ ಅಭಿಮತ

ಜನಸಾಮಾನ್ಯರ ಧ್ವನಿಯಾಗಿದ್ದ ಚೌಡಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ‘12ನೇ ಶತಮಾನದಲ್ಲಿ ಜನ ಸಾಮಾನ್ಯರಿಗೆ ಗಟ್ಟಿ ಧ್ವನಿಯಾಗಿ ಸಾಮಾಜಿಕ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಕಳಕಳಿ ಮೆಚ್ಚುವಂತದ್ದು. ಶ್ರೇಷ್ಠ ಅನುಭವವನ್ನು ಸಮಾಜಕ್ಕೆ ಸಮರ್ಪಿಸಿದ್ದಾರೆ’ ಎಂದು ಕೋಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಯ್ಯಣ್ಣ ಕನ್ಯಾಕೊಳ್ಳುರ ತಿಳಿಸಿದರು.

ನಗರದ ಹಳಿಸಗರ ಬಡಾವಣೆ ಚೌಡಯ್ಯನವರ ಮಠದಲ್ಲಿ ಶುಕ್ರವಾರ ಕೋಲಿ ಕಬ್ಬಲಿಗ ಸಮಾಜದಿಂದ ಸರಳವಾಗಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಘದ ಕಾರ್ಯದರ್ಶಿ ಸಣ್ಣನಿಂಗಣ್ಣ ನಾಯ್ಕೋಡಿ ಹಾಗೂ ಸಮುದಾಯದ ಮುಖಂಡರಾದ ರವೀಂದ್ರನಾಥ ನರಸನಾಯಕ, ಮರೆಣ್ಣ ಮಿಲ್ಟ್ರಿ, ಈರಣ್ಣ ಜಮಾದಾರ್, ಬಸವರಾಜ ಕಂದಳ್ಳಿ, ಸಣ್ಣಮಾನಯ್ಯ,ಭೀಮಣ್ಣ ತಿಪ್ಪನಟಗಿ, ಬಸವರಾಜ ರತ್ತಾಳ, ಗೋಪಾಲಸುರಪುರ, ನಾಗೇಂದ್ರಪ್ಪ ಇಟಗಿ, ಮಲರೆಡ್ಡಿ ವಿಭೂತಿಹಳ್ಳಿ, ದೇವೇಂದ್ರಪ್ಪ ಕೋನೇರ, ಯಲ್ಲಪ್ಪ ನಾಯ್ಕೋಡಿ, ಚಂದ್ರಾಮಪ್ಪ ಆಪ್ಲೆ ಹಾಗೂ ಮಲ್ಲಿಕಾರ್ಜುನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು