ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಿಂದ ಮೋಡ ಕವಿದ ವಾತಾವರಣ; ಮಧ್ಯರಾತ್ರಿ ತುಂತುರು ಮಳೆ

Last Updated 17 ಮಾರ್ಚ್ 2023, 3:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಗುರುವಾರ ಮಧ್ಯರಾತ್ರಿ 15 ರಿಂದ 20 ನಿಮಿಷಗಳ ಕಾಲ ತುಂತುರು ಮಳೆ‌ ಸುರಿಯಿತು.

ಗುರುವಾರ ಬೆಳಿಗ್ಗೆಯಿಂದಲೂ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇತ್ತು.‌ ಉಷ್ಣಾಂಶವೂ 36 ಡಿಗ್ರಿಯಿಂದ‌ 33 ರ ತನಕ ಇಳಿಕೆಯಾಗಿತ್ತು. ಸಂಜೆ ವೇಳೆ ತಂಪು ವಾತಾವರಣ ಮನೆ ಮಾಡಿತ್ತು. ಮಧ್ಯರಾತ್ರಿ 12 ಗಂಟೆಯಿಂದ ತುಂತುರು ಮಳೆ ಸುರಿಯಿತು.

ಜಿಲ್ಲೆಯ ಶಹಾಪುರ, ಸುರಪುರ, ಕೆಂಭಾವಿ,‌ ಯರಗೋಳ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ.‌
ಗುರುವಾರದಿಂದ ಮೋಡ ಕವಿದ ವಾತಾವರಣ ಶುಕ್ರವಾರವೂ ಮುಂದುವರಿದೆ. ತಂಪಾದ ಗಾಳಿ ಬೀಸುತ್ತಿದೆ. ಈ ವರ್ಷದ ಮೊದಲ ಮಳೆಯಿಂದ ಇಳೆ ಸ್ವಲ್ಪ ಮಟ್ಟಿಗೆ ತಂಪಾಗಿದೆ.

ಗುರುಮಠಕಲ್‌ ವರದಿ: ತಾಲ್ಲೂಕಿನ ಚಪೆಟ್ಲಾ, ಯದ್ಲಾಪುರ, ಇಮ್ಲಾಪುರ, ಗಾಜರಕೋಟ, ಕಾಕಲವಾರ ಸೇರಿದಂತೆ ವಿವಿಧೆಡೆ ಗುರುವಾರ ರಾತ್ರಿ ವೇಳೆ ತುಂತುರು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT