ಬುಧವಾರ, ಜನವರಿ 19, 2022
26 °C

ಶಹಾಪುರ: ಶೀತಗಾಳಿಯಿಂದ ತತ್ತರಿಸಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ವಾತಾವರಣದಲ್ಲಿ ಏರುಪೇರು ಹಾಗೂ ವಾಯುಭಾರ ಕುಸಿತದಿಂದ ಶೀತಗಾಳಿಯ ಜತೆಗೆ ತುಂತುರು ಮಳೆಯಿಂದ ಜನತೆ ತತ್ತರಿಸಿ ಹೋದರು. ಇಲ್ಲಿನ ಜನತೆ ಚಳಿ ಎಂದರೆ ಮಾರುದ್ದ ಹೋಗುವರು ಬೆಳಿಗ್ಗೆಯಿಂದ ಚಳಿಯಿ ಹೊಡೆತಕ್ಕೆ ತ್ವರಿತವಾಗಿ ಮನೆಯ ಗೂಡು ಸೇರಿದರು.

ಆದರೆ ಭತ್ತ ಕೊಯ್ಲಿಗೆ ಬಂದಿದ್ದು, ರೈತರು ಜೀವ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ವಾರದ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಒಂದಿಷ್ಟು ಚೇತರಿಸಿಕೊಂಡವರಿಗೆ ಮತ್ತೆ ಮಳೆಯ ಭೀತಿ ಆವರಿಸಿ ಮನದಲ್ಲಿ ಆತಂಕ ಮೂಡಿಸಿದೆ. ಅದರಂತೆ ಹತ್ತಿ ಕೀಳಬೇಕು ಎಂದು ಜಮೀನುಗಳಿಗೆ ತೆರಳಿದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಿದರು.

ಹೂ ಕಟ್ಟುವ ಹಂತದಲ್ಲಿರುವ ತೊಗರಿ ಹಾಗೂ ಬಿಳಿಜೋಳಕ್ಕೆ ತೇವಾಂಶದ ಏರುಪೇರಿನಿಂದ ಬೆಳೆ ಹಾನಿ ಆಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತ ನಾಗಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.