ಸುರಪುರ: ಕಳೆದ ಒಂದು ವಾರದಿಂದ ನಗರದಲ್ಲಿ ಚಳಿ ತನ್ನ ಮೇರೆ ಮೀರಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಕನಿಷ್ಠ ಉಷ್ಣಾಂಶ ಇರುತ್ತದೆ. ಮೈಕೊರೆಯುವ ಚಳಿಗೆ ಚಿಕ್ಕಮಕ್ಕಳು, ವೃದ್ಧರು ಹೈರಾಣಾಗಿದ್ದಾರೆ.

ಬೆಳಿಗ್ಗೆ 6 ಗಂಟೆವರೆಗೆ 19 ಡಿಸೆಗಿಂತ ಕಡಿಮೆ ಉಷ್ಣಾಂಶ ಇರುತ್ತದೆ. ಸೂರ್ಯೋದಯವಾಗುತ್ತಿದ್ದಂತೆ ತಾಪಮಾನ ಕೊಂಚ ಏರಿಕೆಯಾಗುತ್ತದೆ. ಆದರೂ ಚಳಿ ಇರುತ್ತದೆ. ಬಿಸಿಲು ಏರುತ್ತಿದ್ದಂತೆ ಕ್ರಮೇಣ ಉಷ್ಣಾಂಶ 25 ಡಿಸೆವರೆಗೂ ಏರುತ್ತದೆ.

ಇದುವರೆಗೂ ಮನೆಯ ಕಪಾಟಿನಲ್ಲಿದ್ದ ಸ್ವೇಟರ್, ಮಂಕಿಕ್ಯಾಪ್ ಇತರ ಬೆಚ್ಚನೆಯ ಉಡುಗಳು ಹೊರಗೆ ಬಂದಿವೆ. ಸಂಜೆಯಾಗುತ್ತಿದ್ದಂತೆ ಎಲ್ಲರೂ ಬೆಚ್ಚನೆಯ ಉಡುಪು ಧರಿಸುತ್ತಾರೆ. ರಾತ್ರಿ 8 ಗಂಟೆ ಹೊತ್ತಿಗೆ ಮಾರುಕಟ್ಟೆಯಲ್ಲಿ ಜನರು ಇರುವುದಿಲ್ಲ.

ವಿವಿಧ ಬಡಾವಣೆಗಳಲ್ಲಿ ಯುವಕರು, ಜನರು ಬೆಂಕಿ ಹಚ್ಚಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಬೆಳಿಗ್ಗೆ 7 ಗಂಟೆವರೆಗೂ ಹಾಸಿಗೆ ಬಿಟ್ಟು ಮೇಲಕ್ಕೆ ಏಳದ ಪರಿಸ್ಥಿತಿ ಇದೆ. ಹೀಗಾಗಿ ವಾಯುವಿಹಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಶನಿವಾರ ಬೆಳಿಗ್ಗೆ 8 ಗಂಟೆ ಬದಲಿಗೆ 10 ಗಂಟೆಗೆ ಶಾಲೆ ಆರಂಭಿಸಲು ಸೂಚನೆ ನೀಡಿದೆ. ಮನೆಯಲ್ಲಿ ನೆಲಹಾಸು, ಬಾಂಡೆ ಸಾಮಾನುಗಳು ತಣ್ಣಗೆ ಆಗಿರುತ್ತವೆ. ನೀರು ತಣ್ಣಗೆ ಆಗಿದ್ದು ಕೈ ಕಾಲು ತೊಳೆದುಕೊಂಡರೆ ನಡುಗುವಂತಾಗುತ್ತದೆ.

ನಡುಗುವ ಚಳಿಗೆ ಮೈಚರ್ಮ ಒಡೆಯುತ್ತಿದೆ. ಔಷಧಿ ಅಂಗಡಿಗಳಲ್ಲಿ ವೈಟ್ ಪೆಟ್ರೋಲಿಯಂ ಜಲ್ಲಿ ವ್ಯಾಪಾರ ಭರ್ಜರಿಯಾಗಿದೆ. ಬೆಚ್ಚನೆಯ ಉಡುಪಿಗೂ ಬೇಡಿಕೆ ಹೆಚ್ಚಿದೆ. ತೊಳೆದ ಬಟ್ಟೆಗಳು ಒಣಗಲು ಎರಡು ದಿನ ಬೇಕು. ಚಳಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಕಳೆದ ಒಂದು ವಾರದಲ್ಲಿ ಸೋಮವಾರ ಬೆಳಗಿನ ಜಾವ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ಚಳಿ ಮುಂದುವರಿಯುವ ಸಾಧ್ಯತೆ ಇದೆ. ಬೆಳಿಗ್ಗೆ ಬೀಸುವ ಶೀತಗಾಳಿ ಜನರನ್ನು ತತ್ತರಗೊಳಿಸಿದೆ.

ಜನರು ಚಳಿ ತಪ್ಪಿಸಿಕೊಳ್ಳಲು ಮೇಲಿಂದ ಮೇಲೆ ಚಹ, ಕಾಫಿ ಮೊರೆ ಹೋಗುತ್ತಿದ್ದಾರೆ. 8 ಗಂಟೆವರೆಗೂ ಸ್ನಾನ ಮಾಡುವ ಧೈರ್ಯ ಮಾಡುತ್ತಿಲ್ಲ. ಕೆಲವರಲ್ಲಿ ಅತಿ ಚಳಿಯಿಂದ ಬೇಧಿ ಪ್ರಕರಣಗಳು ಕಾಣುತ್ತಿವೆ.

ಚಳಿಯಿಂದ ರಕ್ಷಿಸಿಕೊಳ್ಳಲು ತಜ್ಞರು ನೀಡಿರುವ ಕೆಲವು ಸಲಹೆಗಳು

• ಮೈತುಂಬಾ ಬೆಚ್ಚಗಿನ ಉಡುಪು ಧರಿಸಿ

• ಸಾಕಷ್ಟು ನೀರು (ಬಿಸಿ ನೀರು) ಸೇವಿಸಿ

• ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ

• ನಿಯಮಿತ ಮತ್ತು ಸರಳ ವ್ಯಾಯಾಮ ಮಾಡಿ

• ಲವಂಗ ಶುಂಠಿ ಅರಿಶಿನ ಆಹಾರದಲ್ಲಿ ಇರಲಿ

• ಕೊರೆಯುವ ಚಳಿಯಲ್ಲಿ ಹೊರಗೆ ಬರಬೇಡಿ • ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.