ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಆತ್ಮವಿಶ್ವಾಸವೇ ಪರೀಕ್ಷೆ ಎದುರಿಸುವ ಅಸ್ತ್ರ

ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ
Last Updated 23 ಫೆಬ್ರುವರಿ 2023, 16:35 IST
ಅಕ್ಷರ ಗಾತ್ರ

ಯಾದಗಿರಿ: ಆತ್ಮವಿಶ್ವಾಸವೇ ಪರೀಕ್ಷೆ ಎದುರಿಸುವ ಅಸ್ತ್ರ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಕ್ಕಳಿಗೆ ಕಿವಿ ಮಾತು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಡಗೇರಾ ತಾಲ್ಲೂಕಿನ ವಿವಿಧ ಶಾಲೆಯ ಮಕ್ಕಳೊಂದಿಗೆ ಹೆಜ್ಜೆಗೊಂದು ದಾರಿ, ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಸ್ಫೂರ್ತಿ ಸಂವಾದ ಎಂಬ ವಿನೂತನ ಕಾರ್ಯಕ್ರಮ ನಡೆಸಿದ ಅವರು, ಬಹು ಆಸಕ್ತಿಯಿಂದ ವಿದ್ಯಾರ್ಥಿಗಳಿಂದ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ವಿದ್ಯಾರ್ಥಿಗಳ ಭವಿಷ್ಯದ ಗುರಿಗಳು ಮತ್ತು ಅವರ ಅಭಿಲಾಷೆಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ಇನ್ನೊಬ್ಬರ ಜೊತೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳಬಾರದು. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಲಿ. ಸಾಧನೆಗೆ ಯಾವುದೇ ಅಡ್ಡದಾರಿಗಳು ಇಲ್ಲ. ಶ್ರಮ ವಹಿಸಿದರೆ ಗುರಿ ತಲುಪಲು ಸಾಧ್ಯ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದು ಜೀವನದ ಘಟ್ಟ. ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದುಕೊಳ್ಳಬೇಕು ಎಂಬುದು ಎಲ್ಲರೂ ಪ್ರಯತ್ನಪಡುತ್ತಾರೆ; ಉದ್ದೇಶವೂ ಆಗಿರುತ್ತದೆ. ಆದರೆ, ಫಲಿತಾಂಶ ಏನೇ ಆದರೂ ವಿದ್ಯಾರ್ಥಿಗಳು ಋುಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನುಡಿದರು.

ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾರ್ಥಿಗಳು, ತಮ್ಮ ಪರಿಚಯ ಜೊತೆಗೆ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ ನೀಡಿದ ಅವರು, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಯಶಸ್ವಿಯಾಗಲು ಕಠಿಣ ಪರಿಶ್ರಮ ಬೇಕು. ಮೊದಮೊದಲು ಬಾರಿ ವಿಫಲವಾದರೂ, ಎಂದಿಗೂ ಛಲ ಬಿಡಲಿಲ್ಲ. ನನ್ನ ಗುರಿ ಸಾಧಿಸಲು ದುಪ್ಪಟ್ಟು ಶ್ರಮಿಸುತ್ತಿದ್ದೆ. ಅಧ್ಯಯನದಲ್ಲಿ ಎಲ್ಲಿ ಎಡವುತ್ತಿದ್ದೇವೆ ಎಂದು ಅರಿತುಕೊಂಡು ಮುಂದಿನ ಸಾರಿ ಅದನ್ನು ಎದುರಿಸಿದ್ದೇನೆ ಎಂದರು.

ಜಿಲ್ಲಾಧಿಕಾರಿ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ಶಬ್ದಕೋಶ ಹಾಗೂ ಲೆಕ್ಕಣಿಕೆ ನೀಡಿ ಉತ್ತಮ ಭವಿಷ್ಯಕ್ಕೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಬಸಣ್ಣಗೌಡ ಆಲ್ದಾಳ, ವಿಷಯ ಪರಿವೀಕ್ಷಕ ರಾಜೇಂದ್ರಕುಮಾರ, ಮುಖ್ಯಶಿಕ್ಷಕ ಎನ್.ಎಂ.ಕಾಶಿನಾಥ ಶಾಸ್ತ್ರಿ, ಗಿರೀಶ್ ಮೇಟಿ, ಶಿಕ್ಷಕಿ ಪಾರ್ವತಿ, ಶಿಕ್ಷಕರಾದ ಗುರುರಾಜ, ಮಲ್ಲಪ್ಪ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT