ಶಹಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಯಾವ ಅಭ್ಯರ್ಥಿಯಾದರೂ ಸರಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿದು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ ತಿಳಿಸಿದರು.
ನಗರದ ವಾರ್ಡ್ ನಂ.17ರ ನಗರಸಭೆ ಕಾಂಗ್ರೆಸ್ ಪಕ್ಷದ ಸದಸ್ಯ ಕಾಶಿನಾಥ ಕಲ್ಮನಿ ಮತ್ತು ಸಣ್ಣ ದೇವು ಸುರಪುರಕರ್ ನೇತೃತ್ವದಲ್ಲಿ ನೂರಾರು ಯುವಕರು ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ನಂತರ ಅವರು ಮಾತನಾಡಿದರು.
ನಮ್ಮ ಮತಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕೆ ಹೈಕಮಾಂಡ್ ಸಹ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಿದೆ. ಮತಕ್ಷೇತ್ರದಲ್ಲಿ ಒಂದು ಬಾರಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಪ್ರಸಕ್ತ ಬಾರಿ ಚುನಾವಣೆಯಲ್ಲಿ ಕಮಲವನ್ನು ಅರಳಿಸಬೇಕು. ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಪ್ರತಿ ಬೂತ್‌ನಲ್ಲಿ ಕೆಲಸ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದುಡಿಯೋಣ ಎಂದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರಾಜೂಗೌಡ ಉಕ್ಕಿನಾಳ, ಚೆನ್ನಾರಡ್ಡಿ ಗೋಗಿ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ಬಸವರಾಜ ವಿಭೂತಿಹಳ್ಳಿ, ತಿರುಪತಿ ರೆಡ್ಡಿ, ತಿರುಪತಿ ಹತ್ತಿಕಟಿಗಿ, ಮರೆಪ್ಪ ಹೈಯಾಳಕರ್, ಶಾಂತಪ್ಪ ಚೆನ್ನೂರ, ತಿರುಪತಿ ಸೇರಿ, ಮರೆಪ್ಪ ದೊಡ್ಮನಿ, ದೇವಪ್ಪ ಸುರಪುರಕರ್, ಅಜಯ್ ಶರ್ಮಾ, ಮಾಳಪ್ಪ, ಹೈಯಾಳಪ್ಪ, ಸಿದ್ದಣ್ಣ ಕಾಡಂಗೇರ, ಅಜೀತ ಆನಂದ ಮುಂತಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.