ಸುರಪುರ: ಕೋವಿಡ್ ಮತ್ತು ಲಾಕ್ಡೌನ್ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು, ಸಮರ್ಪಕ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಪಿಐ(ಎಂ), ಎಸ್ಯುಸಿಐ(ಸಿ) ಸಂಸ್ಥೆಗಳ ಸದಸ್ಯರು ಶಾಸಕ ರಾಜೂಗೌಡ ಅವರ ಮನೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ದಾವಲಸಾಬ್ ನಧಾಪ್ ಮಾತನಾಡಿ, 'ಇಂಧನ, ವಿದ್ಯುತ್, ರಸಾಯನಿಕ ಗೊಬ್ಬರಗಳ ಬೆಲೆ ಏರಿಸಿ ಬಡವರ ಮತ್ತು ರೈತರ ಮೇಲೆ ಹೊರೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲಾಗಿದೆ. ಆಳುವ ಸರ್ಕಾರದ ಕೆಲ ಶಾಸಕರು ಆಸ್ಪತ್ರೆಯಲ್ಲಿ ಬೆಡ್, ಔಷಧ, ಲಸಿಕೆ, ಆಕ್ಸಿಜನ್ಗಳನ್ನು ಕಾಳಸಂತೆಯಲ್ಲಿ ತೊಡಗಿದ್ದಾರೆ' ಎಂದು ಆರೋಪಿಸಿದರು.

ಜಿಲ್ಲಾ ಮುಖಂಡ ರಾಮಣ್ಣ ಆಲ್ದಾಳ, ಧರ್ಮಣ್ಣ ದೊರಿ ಸುರಪುರ, ರಫೀಕ್, ಮಲ್ಲೇಶಿ ನಾಗರಾಳ, ದೇವಿಕೆಮ್ಮ ನಾಗರಾಳ, ಸಿದ್ಧಮ್ಮ ಬೋನಾಳ, ಬಸವರಾಜ ನಾಗರಾಳ, ಶರೀಫಮ್ಮ, ಅಮೀನಾಬೇಗಂ, ಈರನಗೌಡ ನಾಗರಾಳ, ಶರಣಬಸವ ಜಂಬಲದಿನ್ನಿ, ಖಾಜಾಸಾಬ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.