ಶನಿವಾರ, ಜನವರಿ 18, 2020
19 °C

ಕೋಣ ಬಲಿ ತಡೆಯಲು ಮನವಿ

 ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ:  ಹುಣಸಗಿ ತಾಲ್ಲೂಕಿನ ಮಂಜಲಾಪುರಹಳ್ಳಿ ಗ್ರಾಮದಲ್ಲಿ ಡಿಸೆಂಬರ್‌ 23 ಮತ್ತು 25 ರಂದು ದೇವತೆಗಳ ಹೆಸರಿನಲ್ಲಿ ನಡೆಯುವ ಕೋಣ ಬಲಿಯನ್ನು ತಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಮುಖಂಡರು ಡಿವೈಎಸ್‍ಪಿ ಶಿವನಗೌಡ ಪಾಟೀಲ ಅವರಿಗೆ ಮನವಿ ಮಂಗಳವಾರ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಜಿಲ್ಲೆಯಲ್ಲಿ ಡಿಸೆಂಬರ್ ದಿಂದ ಫೆಬ್ರವರಿವರೆಗೆ ಆಯಾ ಗ್ರಾಮ ದೇವತೆಗಳಾದ ದ್ಯಾವಮ್ಮ, ಮರೆಮ್ಮ, ಮರಗಮ್ಮ ಮತ್ತು ಕೆಂಚಮ್ಮ ಹೆಸರಿನಲ್ಲಿ ಪ್ರಾಣಿ ಬಲಿ ಕೊಡಲಾಗುತ್ತಿದೆ’ ಎಂದು ದೂರಿದರು.

ಜಿಲ್ಲಾ ಸಂಘಟನಾ ಸಂಚಾಲಕ ಅಜೀಜ್‍ಸಾಬ್ ಐಕೂರ್, ಸುರಪುರ ಸಂಚಾಲಕ ತಿಪ್ಪಣ್ಣ
ಶೆಳ್ಳಗಿ, ತಾಲೂಕು ಸಂಘಟನಾ ಸಂಚಾಲಕ ಮಾನಪ್ಪ ಶೆಳ್ಳಗಿ, ಮುಖಂಡರಾದ ಮರಿಲಿಂಗಪ್ಪ ಹುಣಸಿಹೊಳೆ, ಖಾಜಾ ಹುಸೇನ್ ಗುಡುಗುಂಟಿ, ಮಲ್ಲಿಕಾರ್ಜುನ ಮಳ್ಳಳ್ಳಿ, ಮಲ್ಲಿಕಾರ್ಜುನ ಉಕ್ಕಿನಾಳ, ದೇವಿಂದ್ರಪ್ಪ ಮೈಲಾಪುರ, ಬಸವರಾಜ ಗೋನಾಲ, ಭೀಮಣ್ಣ ಕ್ಯಾತನಾಳ, ಶರಣಪ್ಪ ಉಳ್ಳೆಸೂಗೂರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು