ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವೀಯತೆಯ ಸಾಕಾರ ಮೂರ್ತಿ’ ಶಿವಕುಮಾರ ಸ್ವಾಮೀಜಿ : ಪ್ರಭುಲಿಂಗ ಸ್ವಾಮೀಜಿ

Last Updated 22 ಜನವರಿ 2023, 6:10 IST
ಅಕ್ಷರ ಗಾತ್ರ

ಸುರಪುರ: ‘ಶಿವಕುಮಾರ ಸ್ವಾಮೀಜಿ ಅವರು ಮಾನವೀಯತೆಯ ಸಾಕಾರ ಮೂರ್ತಿ. ಲೋಕ ಕಲ್ಯಾಣಕ್ಕಾಗಿ ಬದುಕನ್ನೇ ಮುಡುಪಾಗಿಟ್ಟರು’ ಎಂದು ನಿಷ್ಠಿ ಕಡ್ಲಪ್ಪನವರ ವಿರಕ್ತಮಠದ ಪ್ರಭುಲಿಂಗ ಸ್ವಾಮೀಜಿ ಹೇಳಿದರು.

ಗಾಂಧಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಪದ್ಮವಿಭೂಷಣ ಡಾ. ಶಿವಕುಮಾರ ಸ್ವಾಮೀಜಿಯ 4ನೇ ವರ್ಷದ ಪುಣ್ಯಸ್ಮರಣೆ ಮತ್ತು ದಾಸೋಹ ದಿನದ ನಿಮಿತ್ತವಾಗಿ ಶನಿವಾರ ಏರ್ಪಡಿಸಿದ್ದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಜುನಾಥ ಜಾಲಹಳ್ಳಿ ನೇತೃತ್ವ ವಹಿಸಿದ್ದರು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ, ಮಹೇಶ ಪಾಟೀಲ, ಪ್ರಕಾಶ ಸಜ್ಜನ್, ಜಿ.ಎಸ್. ಪಾಟೀಲ, ಬಸವರಾಜ ಜಮದ್ರಖಾನಿ, ಬಸವರಾಜ ನಿಷ್ಠಿ ದೇಶಮುಖ, ವಿರೇಶ ಪಂಚಾಂಗಮಠ, ರಾಜಾ ಮುಕುಂದನಾಯಕ, ಜಯಲಲಿತಾ ಪಾಟೀಲ, ಮಂಜುನಾಥ ಗುಳಗಿ, ವಿರೇಶ ನಿಷ್ಠಿ ದೇಶಮುಖ, ಪ್ರಕಾಶ ಅಂಗಡಿ ಕನ್ನೆಳ್ಳಿ, ಜಗದೀಶ್ ಪಾಟೀಲ ಸೂಗೂರು, ಸಿದ್ದನಗೌಡ ಹೆಬ್ಬಾಳ, ಪ್ರದೀಪ ದೊಡ್ಡಮನಿ, ಶಿವರುದ್ರ ಉಳ್ಳಿ, ಜಗದೀಶ ಸೊನ್ನದ, ಚನ್ನಪ್ಪಗೌಡ, ರವಿಗೌಡ, ಮಲ್ಲು ಬಾದ್ಯಾಪುರ, ಪ್ರಕಾಶ ಅಂಗಡಿ ಹೆಮ್ಮಡಗಿ, ರಾಜೇಶ ಸೂಗೂರು, ಭೀಮು ಹಳ್ಳದ, ಮಲ್ಲು ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT