ಕೆಂಭಾವಿ: ‘ಭೋಗೇಶ್ವರ, ಶರಣಬಸವೇಶ್ವರ, ಸ್ವಾಧಿ ಮಲ್ಲಮ್ಮ, ಮುದನೂರಿನ ದೇವರ ದಾಸಿಮಯ್ಯನತಂಹ ಹಲವಾರು ನಾಡು ಕೆಂಭಾವಿ. ಇದು ಸಹ ಮತ್ತೊಂದು ಕಲ್ಯಾಣವಿದ್ದಂತೆ’ ಎಂದು ಶಿವಶಂಕರ ಶಾಸ್ತ್ರಿ ಆಲಗೂರು ಅಭಿಪ್ರಾಯಪಟ್ಟರು.

ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಬುಧವಾರ ಕಾರ್ತಿಕ ಮಾಸದ ಅಂಗವಾಗಿ 11 ದಿನಗಳಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲವು ಊರುಗಳಲ್ಲಿ ರೇವಣಸಿದ್ದೇಶ್ವರ ದೇವಸ್ಥಾನವಿದೆ. ಅದರಲ್ಲಿಯೂ ಇಲ್ಲಿಯ ಕೆಂಭಾವಿಯ ದೇವಸ್ಥಾನದಲ್ಲಿ ಪಂಚಲಿಂಗ ಸ್ಥಾಪನೆಯಾಗಿದೆ ಎಂದು ಅವರು ಹೇಳಿದರು.

ಲಿಂಗನಗೌಡ ಮಾಲಿಪಾಟೀಲ ಮಾತನಾಡಿ, 11 ದಿನಗಳ ಕಾಲ ಪ್ರವಚನ ಕಾರ್ಯಕ್ರಮ ಆಯೋಜನೆ ಮಾಡಿ, ಯಶಸ್ವಿಗೊಳಿಸಿರುವರುವ ಯುವಕರ ಕಾರ್ಯ ಶ್ಲಾಘನೀಯ. ಈ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಮಾತನಾಡಿದರು. ನಾಗರಾಜ ಶಾಸ್ತ್ರಿ ಹೂಗಾರ ಪ್ರಾಸ್ತಾವಿಕ ಮಾತನಾಡಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ಬಾಜಾ ಭಜಂತ್ರಿ ಮೂಲಕ ಕುಂಬ ಮತ್ತು ಭಾವಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು.

ಬಸವರಾಜ ಭಂಟನೂರ, ಯಮನೇಶ ಯಾಳಗಿ, ಮಲ್ಲಯ ಸ್ವಾಮಿ ವಡಗೇರಿ ಸಂಗೀತ ಸೇವೆ ಸಲ್ಲಿಸಿದರು. ಅಂಬಾ ಮಠದ ಸ್ವಾಮಿ, ಮಾಲಹಳ್ಳಿ ಯ ಆರ್ಚಕರು, ಪ್ರವಚನಕಾರರಾದ ಆದಪ್ಪ ಆವಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.