ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥಾಪಕ, ಅಕ್ಷರದಾಸೋಹ ಅಧಿಕಾರಿ ಅಮಾನತಿಗೆ ಆಗ್ರಹ

ಬಿಸಿಯೂಟ ಪಡಿತರ ಆಕ್ರಮ ದಲಿತ ಸಮಿತಿ ಆರೋಪ
Published 7 ಡಿಸೆಂಬರ್ 2023, 2:55 IST
Last Updated 7 ಡಿಸೆಂಬರ್ 2023, 2:55 IST
ಅಕ್ಷರ ಗಾತ್ರ

ಸುರಪುರ: ‘ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸರಬರಾಜು ಮಾಡುವ ಆಹಾರಧಾನ್ಯ ಮತ್ತು ಅಡುಗೆ ಎಣ್ಣೆಯಲ್ಲಿ ಆಕ್ರಮ ನಡೆದಿದ್ದು ಗೋದಾಮು ವ್ಯವಸ್ಥಾಪಕ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಮೇಲೆ ಶಿಸ್ತುಕ್ರಮ ಜರುಗಿಸಬೇಕು’ ಎಂದು ದಲಿತ ಸಮಿತಿ (ಅಂಬೇಡ್ಕರ್‌ ವಾದ) ತಾಲೂಕು ಘಟಕ ಆಗ್ರಹಿಸಿದೆ

ಈ ಕುರಿತು ಬುಧವಾರ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ, ‘ಶಾಲೆಗಳ ಬಿಸಿಯೂಟಕ್ಕೆ ಸರಬರಾಜು ಮಾಡುವ ಆಹಾರ ಧಾನ್ಯ ಮತ್ತು 1 ಸಾವಿರ ಲೀಟರ್ ಅಡುಗೆ ಎಣ್ಣೆ ಗೋದಾಮಿನಿಂದಲೇ ಕಾಳಸಂತೆಗೆ ಸಾಗಾಟವಾಗಿದೆ. ಅಡುಗೆ ಎಣ್ಣೆ ಸರಬರಾಜು ಆಗಿಲ್ಲ ಸಹಕರಿಸಿಕೊಳ್ಳಿ ಎಂದು ಅಕ್ಷರದಾಸೋಹ ಅಧಿಕಾರಿ ಶಾಲಾ ಮುಖ್ಯಸ್ಥರಿಗೆ ಸಮುಜಾಯಿಸಿ ನೀಡುತ್ತಿದ್ದಾರೆ. ಈ ಅಕ್ರಮದಲ್ಲಿ ವ್ಯವಸ್ಥಾಪಕ ಮತ್ತು ಅಕ್ಷರದಾಸೋಹ ಅಧಿಕಾರಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.

ಆಹಾರಧಾನ್ಯವನ್ನು ಶಾಲೆಗಳಿಗೆ ನಿಯಮಾನುಸಾರ ಹಂಚಿಕೆ ಮಾಡುತ್ತಿಲ್ಲ. ಆಹಾರಧಾನ್ಯ ಪ್ರಮಾಣ ಇಳಿಸಲು ಅಕ್ಷರದಾಸೋಹ ಅಧಿಕಾರಿಯವರು ಶಾಲಾ ಮುಖ್ಯಸ್ಥರಿಂದ ₹ 500 ರಿಂದ ₹ 1 ಸಾವಿರವರೆಗೆ ಪ್ರತಿ ಶಾಲೆಯಿಂದ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಈ ಕುರಿತು ಸಮಗ್ರ ತನಿಖೆ ಮಾಡಬೇಕು. ವ್ಯವಸ್ಥಾಪಕ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ತಾಲೂಕು ಸಂಚಾಲಕ ಶರಣಪ್ಪ ವಾಘನಗೇರಿ, ಗೊಲ್ಲಾಳಪ್ಪ, ಕೆಂಚಪ್ಪ ಕಟ್ಟಿಮನಿ, ಪರುಶುರಾಮ ಸಾಸನೂರ ಮಲ್ಲಪ್ಪ ಕೆಸಿಪಿ, ಅಂಬ್ರೇಶ ದೊಡ್ಮನಿ, ಮಡಿವಾಳಪ್ಪ ಬೋನ್ಹಾಳ, ಉಮೇಶ ಎಡಳ್ಳಿ, ಹಣಮಂತ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಲೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT