ಶನಿವಾರ, ಸೆಪ್ಟೆಂಬರ್ 18, 2021
30 °C

ಸುರಪುರ: ‘ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷೆ ಬಸಮ್ಮ ಆಲ್ಹಾಳ ಮಾತನಾಡಿ, ‘ಕೃಷಿ ಕ್ಷೇತ್ರವನ್ನು ಕಬಳಿಸಲು ಕಾರ್ಪೋರೇಟ್ ಸಂಸ್ಥೆಗಳು ಹೊಂಚು ಹಾಕುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆ’ ಎಂದು ದೂರಿದರು.

‘ರೈತರ ಉತ್ಪನ್ನಗಳನ್ನು ಖರೀದಿಸುವ ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಉತ್ತಮ ಬೆಲೆ ನೀಡಲು ಖರೀದಿದಾರ ಕಂಪನಿಗಳು ನಿರಾಕರಿಸಿದರೆ ರೈತರಿಗೆ ರಕ್ಷಣೆಯಿಲ್ಲ. ಆದ್ದರಿಂದ ರೈತ ವಿರೋಧ ಕಾನೂನುಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಶಾಸಕ ರಾಜೂಗೌಡ ಮತ್ತು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿದರು.

ರಾಧಾ ಲಕ್ಷ್ಮೀಪುರ, ಸುರೇಖಾ ಕುಲಕರ್ಣಿ, ಶಹಾಜೀದಿ ಬೇಗಂ, ಪ್ರಕಾಶ ಆಲ್ಹಾಳ, ಮರೆಮ್ಮ ಕಕ್ಕೇರಿ, ಶರಣಬಸವ ಜಂಬಲದಿನ್ನಿ, ಧರ್ಮಣ್ಣ ದೊರಿ, ಮಲ್ಲನಗೌಡ, ಖಾಜಾಸಾಬ್ ದಳಪತಿ, ಸಿದ್ಧಮ್ಮ ಬೋನ್ಹಾಳ, ಮುತ್ತಮ್ಮ, ಸೆಂಟರ್ ಇಂಡಿಯಾ ಟ್ರೇಡ್ ಯುನಿಯನ್, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.