ಗುರುವಾರ , ಫೆಬ್ರವರಿ 20, 2020
19 °C

ಅವಧಿ ಮುಗಿದ ಮದ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಹೊರವಲಯದ ಕರ್ನಾಟಕ ರಾಜ್ಯ ಪಾನಿಯ ನಿಗಮ ನಿಯಮಿತ (ಮದ್ಯ ಸಂಗ್ರಹ ಮಳಿಗೆ) ಆವರಣದಲ್ಲಿ ಅವಧಿ ಮುಗಿದ ₹14.50 ಲಕ್ಷ ಮೌಲ್ಯದ ಮದ್ಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.

ಅಬಕಾರಿ ಇಲಾಖೆ ಉಪ ಅಧೀಕ್ಷಕ ಮಹ್ಮದ್‌ ಇಸ್ಮಾಯಿಲ್ ಮದ್ಯ ಸಂಗ್ರಹ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ನಿರ್ಮಾಣ ಮಾಡಿದ ದೊಡ್ಡ ಗುಂಡಿಯಲ್ಲಿ ಸುರಿದು ನಂತರ ಮಣ್ಣು ಮುಚ್ಚಿಸಿದರು.

ಅಬಕಾರಿ ಇಲಾಖೆ ನಿರೀಕ್ಷಕ ಶಬ್ಬಿರ್, ಉಪತಹಶೀಲ್ದಾರ್ ಮಲ್ಲಿಕಾರ್ಜುನ್ ತಂಗಡಗಿ, ಮದ್ಯ ಸಂಗ್ರಹ ಮಳಿಗೆ ವ್ಯವಸ್ಥಾಪಕ ವೆಂಕಟೇಶ, ಅಡಿವೆಪ್ಪ ಭಜಂತ್ರಿ, ಎಂ.ಎಸ್ ಪಾಟೀಲ, ಯಲ್ಲಾರೆಡ್ಡಿ, ವೆಂಕಟೇಶ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)