ಶಹಾಪುರ: ‘ಜನಪರ ಅಭಿವೃದ್ಧಿ ಕೆಲಸಗಳಿಗೆ ನಗರದ ಜನತೆಯ ಸಹಕಾರ ಅಗತ್ಯ. ಅಭಿವೃದ್ಧಿ ಕೆಲಸಗಳಿಗೆ ಇಲ್ಲ ಸಲ್ಲದ ನೆಪ ಮಾಡಿಕೊಂಡು ಅಡ್ಡಗಾಲು ಹಾಕಬೇಡಿ. ಅಧಿಕಾರಿಗಳು ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಕೆಕೆಆರ್ಡಿಬಿ ವತಿಯಿಂದ ₹ 1 ಕೋಟಿ ವೆಚ್ಚದಲ್ಲಿ ಲಾಂಗ್ ಟೆನಿಸ್ ಕ್ರೀಡಾಂಗಣ ಹಾಗೂ ₹ 75 ಲಕ್ಷ ವೆಚ್ಚದಲ್ಲಿ ಓಪನ್ ಜಿಮ್ ಕಾಮಗಾರಿ ಕೈಗೆತ್ತಿಕೊಂಡಿದೆ. ಕೀಡಾಪಟುಗಳು ಹಾಗೂ ನಗರದ ಯುವಕರಿಗಾಗಿ ಓಪನ್ ಜಿಮ್ನಲ್ಲಿ ಸುಮಾರು 20ಕ್ಕೂ ಅಧಿಕ ನೂತನ ಸಾಮಗ್ರಿಗಳನ್ನು ಅಳವಡಿಸಲು ಸಕಲ ರೀತಿಯಲ್ಲೂ ಸಿದ್ದತೆ ಕೈಗೊಳ್ಳಲಾಗುತ್ತಿದೆ’ ಎಂದರು.

ನಗರದಲ್ಲಿ ಮೋಚಿಗಡ್ಡಾದಿಂದ ಬಸವೇಶ್ವರ ವೃತ್ತದವರೆಗೆ ಪೈಪ್ಲೈನ್ ಮೂಲಕ ₹ 1.05 ಕೋಟಿ ವೆಚ್ಚದಲ್ಲಿ ನೂತನ ಚರಂಡಿ ನಿರ್ಮಾಣ ಕೆಲಸಕ್ಕೆ ಸಾರ್ವಜನಿಕ ಅಕ್ಕಪಕ್ಕದ ಅಂಗಡಿ ವ್ಯಾಪಾರಿಗಳು ಕೆಲವಡೆ ಒತ್ತುವರಿ ಮಾಡಿಕೊಂಡಿದ್ದಾರೆ. ಕಾಮಗಾರಿಗೆ ತೊಂದರೆಯಾಗದಂತೆ ಜನತೆಯ ಸಹಕಾರ ಅಗತ್ಯವಾಗಿದೆ’ ಎಂದರು.

ನಗರದ ಹನುಮಾನ ದೇಗುಲದ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಣವಾಗುತ್ತಿರುವ ಕಟ್ಟಡ ನವೀಕರಣ ಕಾಮಗಾರಿಯನ್ನು ಸಚಿವ ಶರಣಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ, ಎಇಇ ನಾನಾ ಸಾಹೇಬ್, ನಿರ್ಮಿತಿ ಕೇಂದ್ರದ ಎಇಇ ರಾಮನಗೌಡ,ನಗರಸಭೆ ಸದಸ್ಯ ಬಸವರಾಜ ಚೆನ್ನೂರ, ಶಿವುಕುಮಾರ ತಳವಾರ, ಮುಖಂಡರಾದ ಬಸವರಾಜ ಪಾಟೀಲ ಹೇರುಂಡಿ, ಭೀಮರಾಯ ಮಮದಾಪುರ,ಸುರೇಶ ದೇಸಾಯಿ, ಭಗವಂತ್ರಾಯ ಬಳ್ಳೂಂಡಗಿ,ವೀರಭದ್ರಪ್ಪ ಚೌದ್ರಿ,ನಾಗಪ್ಪ ಪೂಜಾರಿ ಭಾಗವಹಿಸಿದ್ದರು.

₹2 ಕೋಟಿ ವೆಚ್ಚದಲ್ಲಿ ಲಾಂಗ ಟೆನಿಸ್ ಕೋರ್ಟ್ | ₹ 75 ಲಕ್ಷ ವೆಚ್ಚದಲ್ಲಿ ಒಪನ್ ಜಿಮ್ ಕಟ್ಟಡ ನಿರ್ಮಾಣ | ₹ 50 ಲಕ್ಷ ವೆಚ್ಚದಲ್ಲಿ ಹನುಮಾನ ದೇಗುಲ ನವೀಕರಣ

ಹನುಮಾನ ದೇಗುಲದ ನವೀಕರಣ ಕಟ್ಟಡ ಕಾಮಗಾರಿ ನಡೆಯುತ್ತಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ವ್ಯಾಪಾರಸ್ಥರಿಗೆ ಚಿಕ್ಕ ಮಳಿಗೆ ನಿರ್ಮಿಸಿ ಕೊಡಲಾಗುವುದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ವಿವಿಧ ಭವನಗಳಿಗೆ ₹ 6 ಕೋಟಿ ಅನುದಾನ

ಶಹಾಪುರ ನಗರದ ಅಲ್ಪಸಂಖ್ಯಾತರ ಭವನ ನಿರ್ಮಾಣಕ್ಕೆ ₹ 2ಕೋಟಿ ವೀರಶೈವ ಕಲ್ಯಾಣ ಭವನ ಹಾಗೂ ಕನಕಭವನ ನಿರ್ಮಾಣಕ್ಕೆ ತಲಾ ₹ 2ಕೋಟಿ ಮಂಜೂರಾತಿ ನೀಡಿದೆ. ತ್ವರಿತವಾಗಿ ಕೆಲಸ ನಿರ್ವಹಿಸಲಾಗುವುದು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಈಗಾಗಲೇ ನಗರದ ವಿಭೂತಿಹಳ್ಳಿ ಹತ್ತಿರ ಒಂದು ಎಕರೆ ಜಮೀನು ಅಲ್ಪಸಂಖ್ಯಾತರ ಕಲ್ಯಾಣ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಆಗಿದೆ. ಅಲ್ಲದೆ ಈಗಾಗಲೇ ₹ 2ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ಹಾಗೂ ಬಾಬು ಜಗಜೀವನರಾಂ ಅವರ ಕಲ್ಯಾಣ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.