ಸೋಮವಾರ, ಜನವರಿ 24, 2022
28 °C

ಸಾಧು ಸಂತರು, ಬಡವರಿಗೆ ವಸ್ತ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡೇಕಲ್ಲ (ಹುಣಸಗಿ): ಪರೋಪಕಾರ ಹಾಗೂ ಸಮಾಜ ಸೇವೆಯಲ್ಲಿ ತೊಡಗುವುದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಸಂಗಪ್ಪ ಶಿವಪೂರ ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ (ಪ್ಯಾಟಿ ಗುಡಿ) ಆವರಣದಲ್ಲಿ ಉದ್ಯಮಿ ಸಂಗನಗೌಡ ಚಿಮ್ಮಲಗಿ ಅವರು ತಮ್ಮ ಪುತ್ರನ ಜನ್ಮ ದಿನದ ಪ್ರಯುಕ್ತ ನಿರ್ಗತಿಕರು ಹಾಗೂ ಬಡವರಿಗೆ ವಸ್ತ್ರದಾನ ಮಾಡಿ, ಬಳಿಕ ಮಾತನಾಡಿದರು.

ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಮಾಡುವ ಕಾರ್ಯ ಹೆಚ್ಚು ಜನರಿಗೆ ತಲುಪುತ್ತದೆ. ಚಿಮ್ಮಲಗಿ ಅವರು ಪ್ರತಿ ವರ್ಷ ನಿರ್ಗತಿಕರು, ಸಾಧು-ಸಂತರು, ಬಡ ಕುಟುಂಬಗಳಿಗೆ ಅನ್ನ, ವಸ್ತ್ರ ನೀಡುವ ಮೂಲಕ ಬಡವರಲ್ಲಿಯೇ ದೇವರ ಸ್ವರೂಪ ಕಾಣುತ್ತಿರುವುದು ಮಾದರಿ ಕಾರ್ಯ ಎಂದರು.

ಈ ವೇಳೆ ಬಸಣ್ಣ ಹಳೇಪೂಜಾರಿ, ಉದ್ಯಮಿ ಸಂಗನಗೌಡ ಚಿಮ್ಮಲಗಿ, ಚಿದಂಬರಗೌಡ, ಬಸವ ಪ್ರಭುಗೌಡ, ರಾಚೋಟಿ ಪೊಲೀಸ್ ಪಾಟೀಲ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ರಾಜವಾಳ, ವೀರೇಶ ಮೂಕಾರ್ತಿಹಾಳ, ರವಿಶಂಕರ ಅಡ್ಡಿ, ಬಸವರಾಜ ಮಾಸ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.