ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭ: ಸಂಸದ ರಾಜಾ ಅಮರೇಶ ನಾಯಕ ಹೇಳಿಕೆ

Last Updated 7 ಅಕ್ಟೋಬರ್ 2020, 3:37 IST
ಅಕ್ಷರ ಗಾತ್ರ

ಯಾದಗಿರಿ: ‘ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭವಾಗುತ್ತದೆ ಹೊರತು ನಷ್ಟವಾಗುವುದಿಲ್ಲ’ ಎಂದು ರಾಯಚೂರು ಸಂಸದ ರಾಜಾ ಅಮರೇಶ ನಾಯಕ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‌‌‌ಕೃಷಿ ವಲಯ ಸುಧಾರಣೆಗಾಗಿ ಕೇಂದ್ರ ಸರ್ಕಾರ ಮೂರು ಹೊಸ ಕಾಯ್ದೆ ಅಂಗೀಕರಿಸಿ ಜಾರಿಗೊಳಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ’ ಎಂದರು.

'ಕೃಷಿ ತಿದ್ದುಪಡಿ ಮಸೂದೆಯಿಂದ ಒಂದು ದೇಶ ಒಂದು ಕೃಷಿ ಮಾರುಕಟ್ಟೆ ಕಲ್ಪನೆಯಾಗಲಿದೆ. ರೈತರು ಎಲ್ಲಿ ಬೇಕಾ ದರೂ ಮಾರಾಟ ಮಾಡುವುದಕ್ಕೆ ಸ್ವತಂತ್ರರಾಗಿ ರುತ್ತಾರೆ. ಮಧ್ಯವರ್ತಿ ಗಳಿಂದ ರೈತರಿಗೆ ಆಗುವ ಅನ್ಯಾಯ, ತೊಂದರೆಗಳಿಂದ ರೈತರು ಮುಕ್ತ ರಾಗಿರುತ್ತಾರೆ.ಕೃಷಿ ಕ್ಷೇತ್ರಕ್ಕೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೂಡಿಕೆ ಮಾಡುವ ಉದ್ದೇಶ ಈಡೇರುತ್ತದೆ’ ಎಂದು ಹೇಳಿದರು

‘ನರೇಂದ್ರ ಸಿಂಗ್ ತೋಮರ್ ಅವರು ಮಂಡಿಸಿದ ಕೃಷಿ ವಲಯಕ್ಕೆ ಸಂಬಂಧಿಸಿದಂತೆ 3 ಮಸೂದೆಗಳು ಮೊದಲು ನೀತಿ ಆಯೋಗ ಸಭೆಯಲ್ಲಿ ಮತ್ತು 12 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸಿದ ನಂತರವೇ
ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸ ಲಾಗಿದೆ’ ಎಂದರು.

‘ಕಾಯ್ದೆಗಳಲ್ಲಿ ಡಾ.ಸ್ವಾಮಿನಾಥನ್ ವರದಿ ಅಂಶಜಾರಿಗೆ ತರಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ‌. ರೈತರಿಗೆ ಅನುಕೂಲವಾಗಲು ಈ ಕಾಯ್ದೆ ಜಾರಿಗೆ ತರಲಾಗಿದೆ‌. ಬೆಂಬಲ ಬೆಲೆ, ಎಪಿಎಂಸಿ, ಮಂಡಿ ಇರಲಿವೆ’ ಎಂದರು.

‘ಭೂ ಒಡೆತನದಿಂದ ಸಣ್ಣ ಹಿಡುವಳಿ ರೈತರಿಗೆ ತೊಂದರೆ ಆಗುವುದಿಲ್ಲ. ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ತೆಗೆಯಲಾಗುವುದು, ಕಡೇಚೂರಿನಲ್ಲಿ ಬಲ್ಕ್ ಫಾರ್ಮಾನಿಂದ ಉದ್ಯೋಗ ಸಿಗಲಿದೆ. ಗದಗ- ವಾಡಿ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ ದೇವರಾಜ ನಾಯಕ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವಿಂದ್ರನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT