ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

ಸುರಪುರ: ತಾಲ್ಲೂಕಿನ ರೈತರಿಗೆ ದಿನಕ್ಕೆ ಕನಿಷ್ಠ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹು ಹಯ್ಯಾಳ ಮಾತನಾಡಿ, ‘ಸದ್ಯ ರೈತರ ಪಂಪ್ಸೆಟ್ಗಳಿಗೆ ದಿನಕ್ಕೆ 7 ತಾಸು ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಅದರಲ್ಲಿ 2 ತಾಸು ವಿದ್ಯುತ್ ಪೂರೈಕೆ ಇರುವುದಿಲ್ಲ. ಇಷ್ಟು ವಿದ್ಯುತ್ ಬಳಸಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯ’ ಎಂದರು.
‘ಮುಂದೆ ಬೇಸಿಗೆ ಆರಂಭವಾಗುತ್ತದೆ. ಜಮೀನು ಶೀಘ್ರದಲ್ಲಿ ಹಸಿ ಆರುತ್ತದೆ. ಹೀಗಾಗಿ ಬೆಳೆಗಳು ಒಣಗಿ ರೈತ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ವಿವರಿಸಿದರು.
‘ಕೆಂಭಾವಿ ಭಾಗದ ರೈತರಿಗೆ ಕೆಂಭಾವಿ ಫೀಡರ್ನ ಬದಲು ತಿಪ್ಪನಟಗಿ ಫೀಡರ್ನಿಂದ ವಿದ್ಯುತ್ ಪೂರೈಸಬೇಕು. ಇದರಿಂದ ಈ ಭಾಗದ ಹೆಗ್ಗನದೊಡ್ಡಿ, ಗೋಡ್ರಿಹಾಳ ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಈರಣ್ಣ ಅಳ್ಳಿಚಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಎಚ್.ಆರ್. ಬಡಿಗೇರ ಕೇಂಭಾವಿ, ದೇವೇಂದ್ರ ಬನಗುಂಡಿ ಹಾಗೂ ಮಂಜುನಾಥ ಧರಣಿ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.