ಯಾದಗಿರಿ: ಇಲ್ಲಿನ ಲುಂಬಿನಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸೋಮವಾರ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.

77ನೇ ಗಣರಾಜ್ಯೋತ್ಸವದ ಅಂಗವಾಗಿ ಈ ಫಲಪುಷ್ಪ ಪ್ರದರ್ಶನವು ಜನವರಿ 28ರ ವರೆಗೆ ನಡೆಯಲಿದೆ. ಇದರ ಜೊತೆಗೆ ಕೃಷಿ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದೆ. ತಮ್ಮ ಇಲಾಖೆಗಳ ಯೋಜನೆಗಳ ಮಾಹಿತಿಯನ್ನು ವೀಕ್ಷಕರಿಗೆ ಹಂಚಿಕೊಳ್ಳಲಾಗುತ್ತಿದೆ.

ಉದ್ಯಾನದ ಹಸಿರು ಹುಲ್ಲಿನ ಹಾಸಿಗೆ ಮೇಲೆ ಸೇವಂತಿಗೆ, ಗುಲಾಬಿ, ಚೆಂಡು ಹೂ, ಮಲ್ಲಿಗೆ ಸೇರಿದಂತೆ ಬಣ್ಣ ಬಣ್ಣದ ಹೂವುಗಳಿಂದ ಹಲವು ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಹೂವಿನಲ್ಲಿ ಮೂಡಿಬಂದ ಡಾಲ್ಫಿನ್ಗಳು, ಹೂಗಳ ಮಾರಾಟಕ್ಕೆ ಬಂದ ಪುಷ್ಪಲತಾ ಚಿತ್ರ, ನೀರಿನಿಂದ ಹೊರಬಂದ ಹಂಸ, ಚೆಂಡು ಮತ್ತು ಗುಲಾಬಿ ಹೂಗಗಳಲ್ಲಿ ಮೂಡಿದ ಕರ್ನಾಟಕದ ನಕ್ಷೆಯ ಕಲಾಕೃತಿಗಳು ಕಲಾವಿದರ ವೈವಿಧ್ಯಮಯ ಕಲ್ಪನೆಗೆ ಸಾಕ್ಷಿಯಾದವು.

ಸಿರಿಧಾನ್ಯದಲ್ಲಿ ಮೂಡಿಬಂದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಮೂರ್ತಿಗಳು ಆಕರ್ಷಣೀಯವಾಗಿವೆ. ಕೆಟ್ಟದನ್ನು ಕೇಳಬೇಡ, ನುಡಿಯಬೇಡ, ನೋಡ ಬೇಡ ಎಂಬ ಗಾಂಧಿಯ ತತ್ವ ಸಾರುವ ಮೂರು ಕೋತಿಗಳ ಜೊತೆಗೆ ಅತಿಯಾಗಿ ಮೊಬೈಲ್ ಬಳಸಬೇಡ ಎನ್ನವ ಕೋತಿಯೂ ಫಲಪುಷ್ಫ ಪ್ರದರ್ಶನದಲ್ಲಿ ಎಲ್ಲರನ್ನು ತನ್ನತ್ತ ಸೆಳೆದವು.

ತರಕಾರಿಗಳಲ್ಲಿ ಪ್ರಾಣಿ-ಪಕ್ಷಿಗಳ ಕೆತ್ತನೆಯ ಕಲಾಕೃತಿಗಳು, ಕಲ್ಲಂಗಡಿ ಹಣ್ಣುಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ಮಹಿಳಾ ಸಾಧಕಿಯರ, ಸಮಾಜ ಸುಧಾರಕರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಚಿತ್ರಗಳನ್ನು ಬಿಡಿಸಲಾಯಿತು. ಕುಟುಂಬ ಸಮೇತರಾಗಿ ಪ್ರದರ್ಶನ ವೀಕ್ಷಣೆಗೆ ಬಂದವರು ಸೆಲ್ಪಿ ತೆಗೆದುಕೊಂಡು ಆನಂದಿಸಿದರು. ಮಕ್ಕಳನ್ನು ಕಲಾಕೃತಿಗಳ ಮುಂದೆ ನಿಲ್ಲಿಸಿದ ಪೋಷಕರು, ಹೂಗಳನ್ನು ನೋಡಿ ಆನಂದಿಸುವ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.