ಶನಿವಾರ, ಆಗಸ್ಟ್ 20, 2022
22 °C
ನದಿಯಲ್ಲಿ ಈಜಲು ತೆರಳಿದ್ದ ವೇಳೆ ನಾಪತ್ತೆ; ಕಾರ್ಯಾಚರಣೆಗೆ ಮೀನುಗಾರರ ನೆರವು

ನಾಲ್ವರು ಬಾಲಕರ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಹೊರವಲಯದ ಭೀಮಾ ನದಿಯಲ್ಲಿ ಭಾನುವಾರ ಈಜಲು ತೆರಳಿದ್ದ ನಾಲ್ವರ ಬಾಲಕರ ಮೃತದೇಹಗಳು ಸೋಮವಾರ ಬೆಳಿಗ್ಗೆ ಪತ್ತೆಯಾಗಿವೆ.

ನಗರದ ಅಜೀಜ್ ಕಾಲೊನಿಯ ಅಮನ್ (16), ಅಯಾನ್ (16), ರೆಹಮಾನ್ (16),
ಕಲಬುರ್ಗಿಯ ರೆಹಮಾನ್ (16) ಸಾವನ್ನಪ್ಪಿದವರು.

ಅಗ್ನಿಶಾಮಕ ದಳದ ಸಿಬ್ಬಂದಿ, ಎನ್‌ಡಿಆರ್‌ಎಫ್‌ ತಂಡ, ರಾಷ್ಟ್ರೀಯ ಗೃಹರಕ್ಷಕ ದಳ, ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿದ್ದರು. ಸ್ಥಳೀಯ ಮೀನುಗಾರರಾದ ತಾಯಪ್ಪ ತಾಂಡೂರಕರ, ಅಂಬರೇಶ್ ತಾಂಡೂರಕರ, ಮಲ್ಲಪ್ಪ ಜಾಲಗಾರ, ಮಲ್ಲಪ್ಪ ಕೋಟಿಮನಿ, ಕೃಷ್ಣಪ್ಪ, ಶುಭಾಷ ಜಾಲಗಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಭಾನುವಾರ ಕತ್ತಲಾಗುವವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಮತ್ತೆ ಸೋಮವಾರ ಬೆಳಿಗ್ಗೆ ಕಾರ್ಯಾ ಚರಣೆ ನಡೆಸಲಾಗಿ ಮೃತದೇಹ ಪತ್ತೆಯಾಗಿವೆ. ಬಾಲಕರು ನೀರುಪಾಲಾಗಿ ರುವ ಘಟನೆ ಭಾನುವಾರ ಸಂಜೆ ಸುಮಾರು 5.30ಕ್ಕೆ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗಿತ್ತು. ಹೈದರಬಾದ್‌ನಿಂದ 16 ಜನ ಎನ್‍ಡಿಆರ್‌ಎಫ್‌ ತಂಡ 4 ಬೋಟ್ಸ್ ತಂದು ಕಾರ್ಯಾಚರಣೆ ಮಾಡಲಾಗಿತ್ತು. 

‘ಕಾರ್ಯಾಚರಣೆ ಮೂಲಕ ಬಾಲಕರ ಮೃತದೇಹಗಳನ್ನು ಹೊರತೆಗೆದು ನಿಯಮಾನುಸಾರ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾಹಿತಿ ನೀಡಿದರು.

‘ಜಿಲ್ಲಾಧಿಕಾರಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗುರುಸುಣಗಿ ಬ್ರಿಡ್ಜ್ ಬಳಿ ಎಚ್ಚರಿಕೆ ಸಂದೇಶದ ನಾಮಫಲಕ ಅಳವಡಿಸಲಾಗುವುದು. ಸುತ್ತಮತ್ತಲು ತಂತಿ ಬೇಲಿ ಅಳವಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

***

ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದು ನಿಯಮಾನುಸಾರ ಮರಣೋತ್ತರ ಪರೀಕ್ಷೆ ಮಾಡಿ ಬಾಲಕರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.