ಶನಿವಾರ, ಮಾರ್ಚ್ 25, 2023
25 °C
‘ಟೊಮೆಟೊ ಬೆಳೆಯಲ್ಲಿ ಆಧುನಿಕತೆ’ ಕುರಿತು ತರಬೇತಿ

‘ಹಣ್ಣು, ತರಕಾರಿ ಉತ್ಪಾದನೆ: ದೇಶಕ್ಕೆ 2ನೇ ಸ್ಥಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇಡೀ ವಿಶ್ವದಲ್ಲಿಯೇ ಭಾರತ ದೇಶವು ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಮತ್ತು ಟೊಮೆಟೊ ಉತ್ಪಾದನೆಯಲ್ಲಿ 2ನೇ ಸ್ಥಾನ (ಮೊದಲ ಸ್ಥಾನ ಚೀನಾ) ದಲ್ಲಿದೆ ಎಂದು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳು ಡಾ. ರೇವಣಪ್ಪ ತಿಳಿಸಿದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ ನಡೆದ ಟೊಮೆಟೊ ಬೆಳೆಯಲ್ಲಿ ಆಧುನಿಕತೆ ಕುರಿತು ಶುಕ್ರವಾರ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತರಕಾರಿ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಟೊಮೆಟೊ. ಹೀಗಾಗಿ ಟೊಮೆಟೊದ ಸೂಕ್ತ ತಳಿಗಳನ್ನು ಆರಿಸಿಕೊಂಡು ವರ್ಷದ ಎಲ್ಲಾ ಋತುಗಳಲ್ಲಿ ಲಾಭ ಪಡೆಯಬಹುದಾಗಿದೆ. ಟೊಮೆಟೊ ಬೆಳೆಯಲು ಮಣ್ಣು, ನೀರು ನಿರ್ವಹಣೆಯೊಂದಿಗೆ ಪ್ರೋಟ್ರೆಗಳಲ್ಲಿ ಸಸಿ ತಯಾರಿಸುವ ಬಗ್ಗೆ, ನಾಟಿ ಪದ್ಧತಿ, ಗಿಡಗಳ ಅಂತರ, ಎಕರೆಗೆ ರಸಗೊಬ್ಬರ ಪೂರೈಕೆ ಬಗ್ಗೆ ವಿವರಿಸಿದರು.

ಟೊಮೆಟೊ ಬೆಳೆಗೆ ಆಧಾರ ಕೊಡುವ, ಚಾಟನಿ, ಆಕಾರ ಕೊಡುವ ಮತ್ತು ನೀರ್ ಕೊಂಬೆಗಳ ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿ ತಪ್ಪದೇ ಅನುಸರಿಸುವಂತೆ ಹೇಳಿದರು.

ಟೊಮೆಟೊನಿಂದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು (ರಸ, ಜಾಮ್, ಸಾಸ್, ಕೆಚಪ್, ಪುರಿ, ಪಿಕಲ್ಸ್, ಚಟ್ನಿ ಮತ್ತು ಪೌಡರ್) ತಯಾರಿಸಬಹುದು. ಸ್ವಸಹಾಯ ಗುಂಪು ಅಥವಾ ರೈತ ಉತ್ಪಾದನಾ ಸಂಸ್ಥೆಗಳ ಸ್ಥಾಪನೆ ಮುಖಾಂತರ ಟೊಮೆಟೊ ಮೌಲ್ಯವರ್ಧನೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ ಮಾತನಾಡಿ, ಟೊಮೆಟೊದಲ್ಲಿ ಬರುವ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಈ ತರಬೇತಿಯ ಕೊನೆಯಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಸಂಪನ್ಮೂಲ ವ್ಯಕ್ತಿ ಡಾ. ರೇವಣಪ್ಪ ಮತ್ತು ಡಾ. ಪ್ರಶಾಂತ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.