ಮಂಗಳವಾರ, ಸೆಪ್ಟೆಂಬರ್ 28, 2021
25 °C

ಗಣೇಶೋತ್ಸವ ಇಂದು ನಿರ್ಧಾರ; ಶಹಾಪುರದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ‘ಗಣೇಶೋತ್ಸವ ಭಾವನಾತ್ಮಕ ಸಂಬಂಧವಾಗಿದೆ. ಅದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಅಲ್ಲ. ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

‘ಈ ಕುರಿತು ಕಳೆದ ವಾರವೂ ಒಂದು ಸಭೆ ನಡೆದಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಣೇಶೋತ್ಸವ ಎಲ್ಲೆಲ್ಲಿ ಎಷ್ಟು ದಿನ ಆಚರಣೆ ಮಾಡಬೇಕು ಎಂದು ಮಾಹಿತಿ ಕೊಟ್ಟಿದ್ದಾರೆ. ತಜ್ಞರ ಸಮಿತಿ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಚರ್ಚಿಸಿ, ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾರೆ’ ಎಂದು ಶಹಾಪುರ ಎಪಿಎಂಸಿ ಆವರಣದಲ್ಲಿ ತಿಳಿಸಿದರು.

ಮೈಸೂರಿನ ವಸತಿ ನಿಯಲದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಅತ್ಯಾಚಾರ ನಡೆದಿಲ್ಲ. ಅವರಿಬ್ಬರು ಸ್ನೇಹಿತರೇ. ಅವರಿಬ್ಬರು ನಾಟಕವಾಡುತ್ತಿದ್ದರು. ಪೊಲೀಸರು ಆಕ್ಷನ್ ಮಾಡಿದಾಗ ಆಗ ಗೊತ್ತಾಗಿದೆ. ಅತ್ಯಾಚಾರನೂ ಇಲ್ಲ ಏನೂ ಇಲ್ಲ’ ಎಂದರು.

‘ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಒಂದು ಬಾರಿ ಜಾಸ್ತಿ, ಒಂದು ಬಾರಿ ಕಡಿಮೆ ಆಗುತ್ತದೆ. ಕೇಂದ್ರ ಸರ್ಕಾರ ಸಮತೋಲನ ಮಾಡಲು ಕೆಲಸ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.