ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ; ಗುಡ್ಡದ ಮಲ್ಲಯ್ಯ ಜಾತ್ರೆ

Last Updated 24 ನವೆಂಬರ್ 2022, 5:34 IST
ಅಕ್ಷರ ಗಾತ್ರ

ಯರಗೋಳ: ಗ್ರಾಮದ ಗುಡ್ಡದ ಮಲ್ಲಯ್ಯನ ಜಾತ್ರೆ ಮರೆಪ್ಪ ಪೂಜಾರಿ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಜರುಗಿತು.

ಮಂಗಳವಾರ ರಾತ್ರಿ 8ಕ್ಕೆ ಮಾನೆಗಾರ ಓಣಿಯಲ್ಲಿರುವ ಮಲ್ಲಯ್ಯನ ದೇವಸ್ಥಾನದಿಂದ ಹೊರಟ ಅಲಂಕೃತದ ಪಲ್ಲಕ್ಕಿ ಮೆರವಣಿಗೆ ಗುಡ್ಡದ ಮಲ್ಲಯ್ಯನ ದೇವಸ್ಥಾನ ತಲುಪಿತು. ನಂತರ ಗುಡ್ಡದ ಮೇಲಿರುವ ಜ್ಯೋತಿಗೆ ತುಪ್ಪದ ಸೇವೆ ಜರುಗಿತು.

ಬುಧವಾರ ಬೆಳಗ್ಗೆ 9 ಗಂಟೆಗೆ ಸಾವಿರಾರು ಸಂಖ್ಯೆಯ ಭಕ್ತರು ಜೈಕಾರ ಕೂಗುತ್ತಾ, ಭಂಡಾರ ಚೆಲ್ಲುತ್ತಾ ಸರಪಳಿ ಹರಿದರು.

ಗುಡ್ಡದ ಎತ್ತರದ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಕುಳಿತು ಜಾತ್ರೆಯಲ್ಲಿನ ಸಂಭ್ರಮದ ಕ್ಷಣಗಳನ್ನು ವೀಕ್ಷಿಸಿದರು. ಸಿಹಿ ಪಳಾರ, ಮಕ್ಕಳ ಆಟಕ್ಕೆ ಸಾಮಗ್ರಿಗಳು, ಬಳೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.

ಭಕ್ತರಿಗೆ ಗೋಧಿ ಹುಗ್ಗಿ, ಅನ್ನ, ಸಾಂಬಾರ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT