ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್ | ಮೃತಪಟ್ಟ ದೇವರ ಹೋರಿ: ಅಂತ್ಯಕ್ರಿಯೆ

Published 11 ಸೆಪ್ಟೆಂಬರ್ 2023, 5:52 IST
Last Updated 11 ಸೆಪ್ಟೆಂಬರ್ 2023, 5:52 IST
ಅಕ್ಷರ ಗಾತ್ರ

ಗುರುಮಠಕಲ್: ಹತ್ತಿರದ ಚಪೆಟ್ಲಾ ಗ್ರಾಮದಲ್ಲಿ ಶನಿವಾರ ಗ್ರಾಮ ದೇವತೆ ಮಾತೆ ಮಹೇಶ್ವರಿದೇವಿ ದೇವಸ್ಥಾನದ ದೇವರ ಹೋರಿ (ನಂದಿ) ಶನಿವಾರ ಮೃತಪಟ್ಟಿದ್ದು, ಗ್ರಾಮಸ್ಥರು ಧಾರ್ಮಿಕ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.

ದೇವರ ಹೋರಿಯ ಕಳೇಬರವನ್ನು ಟ್ರ್ಯಾಕ್ಟರ್ ಮೇಲಿರಿಸಿ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಮಂಗಳವಾದ್ಯಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳ ಮೂಲಕ ಅಂತಿಮ ಯಾತ್ರೆಯನ್ನು ನಡೆಸಿದರು.

ಮಂಗಳವಾದ್ಯಗಳ ಸಮೇತ ಮೆರವಣಿಗೆಯ ಮೂಲಕ ಗ್ರಾಮದೇವತೆ ಮಾತೆ ಮಹೇಶ್ವರಿ ದೇವದಿ ದೇವಸ್ಥಾನದ ಬೆಟ್ಟಕ್ಕೆ ತಲುಪಿದ ನಂತರ ಧಾರ್ಮಿಕ ವಿಧಿಗಳಂತೆ ದೇವರ ಹೋರಿಗೆ ಅಂತಿ ಪೂಜೆ ಮತ್ತು ಮಂಗಳಾರತಿಯನ್ನು ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT