ಸುರಪುರ: ‘ಗೌತಮ ಬುದ್ಧ ಜ್ಞಾನೋದಯವಾದ ನಂತರ ಆಷಾಢ ಮಾಸ (ಗುರು ಪೂರ್ಣಿಮೆ) ಹುಣ್ಣಿಮೆ ದಿನದಂದು ಪಾಲಿ ಭಾಷೆಯಲ್ಲಿ ತನ್ನ 5 ಜನ ಅನುಯಾಯಿ ಶಿಷ್ಯರಿಗೆ ಸಾರಾನಾಥ ಬಳಿಯ ಜಿಂಕೆ ಉದ್ಯಾನದಲ್ಲಿ ಜ್ಞಾನ ಅಂದರೆ ಏನು ಎಂದು ಸತ್ಯದ ಬಗ್ಗೆ ಮೊದಲನೆ ಧಮ್ಮ ಉಪದೇಶ ನೀಡಿದ್ದರು. ಇದು ಬೌದ್ಧರಿಗೆ ವಿಶೇಷ ಪವಿತ್ರ ದಿನವಾಗಿದೆ’ ಎಂದು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ಹೇಳಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗುರುವಾರ ಏರ್ಪಡಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಪಂಚಶೀಲ ಪಠಣ ಮಾಡಿ ಮಾತನಾಡಿದರು.

‘ಬೌದ್ಧ ಅನುಯಾಯಿಗಳಿಗೆ ವಿಶ್ವದ ಎಲ್ಲ ಬೌದ್ಧ ನೆಲೆಗಳಲ್ಲಿ ಇಂದು ಸಂಭ್ರಮದ ದಿನವಾಗಿದೆ. ಇಂದಿನಿಂದ 3 ತಿಂಗಳು ಕಾಲ ಬೌದ್ಧ ಬಿಕ್ಕುಗಳು ಉಪವಾಸ ಕೈಗೊಂಡು ನಾಡಿನಲ್ಲಿ ಎಲ್ಲರು ಸುರಕ್ಷಿತವಾಗಿ ಇರಲಿ ಎಂದು ಪ್ರೀತಿ, ಕರುಣೆ, ಮೈತ್ರಿಯನ್ನು ಸಾರುವರು’ ಎಂದು ನುಡಿದರು.

ಬೌದ್ಧ ಉಪಾಸಕರು ಬುದ್ಧರ ಮೂರ್ತಿಗೆ ಹೂ, ಹಣ್ಣು ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮೇಣದಬತ್ತಿ ಹಚ್ಚಿ ಪ್ರಾರ್ಥಿಸಿದರು.

ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ರಾಜಾ ರಂಗಪ್ಪನಾಯಕ, ಶರ್ಮಿಳಾ ಕರಡಕಲ್, ಮಾಳಪ್ಪ ಕಿರದಳ್ಳಿ, ಪರಶು ನಾಟೆಕಾರ, ಹಣಮಂತ ತೇಲ್ಕರ್, ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಸುನಿತಾ ಕಿರದಳ್ಳಿ, ಚಂದಪ್ಪ ಪಂಚಮ, ಗಣೇಶ ದೇವಿಕೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.