ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಜಿಟಿಜಿಟಿ ಮಳೆ, ದಟ್ಟ ಮಂಜು, ಹತ್ತಿ ಬೆಳೆ ಕುಂಠಿತ ಆತಂಕ

Last Updated 9 ಅಕ್ಟೋಬರ್ 2022, 7:18 IST
ಅಕ್ಷರ ಗಾತ್ರ

ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ಆಗಸ್ಟ್ ತಿಂಗಳ ಆರಂಭದಿಂದಲೂ ಬಿಟ್ಟೂ ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಹತ್ತಿ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ಆಗಸ್ಟ್‌ನಲ್ಲಿ ನಿರಂತರ ಮಳೆ ಸುರಿದದ್ದು, ಇದೀಗ ಮತ್ತೆ ಮಳೆ ಆರಂಭವಾಗಿದ್ದರಿಂದ ಹೆಚ್ಚಿನ ತೇವಾಂಶದಿಂದ ಬೇರು ಕೊಳೆತು ಹತ್ತಿ ಗಿಡಗಳು ಕೆಂಬಣ್ಣಕ್ಕೆ ತಿರುಗಿವೆ. ಅವು ಬಹುತೇಕ ಸಾಯುತ್ತಿವೆ. ಉಳಿದಿದ್ದೂ ಕೈ ಸೇರುವ ಭರವಸೆ ಇಲ್ಲದಂತಾಗಿದೆ.

ಹತ್ತಿ ಹೂವಿನಲ್ಲಿ ನೀರ ಹನಿ ಇಳಿದು ಹೂವಿನ ತುಂಬು ಕೊಳೆತು ಉದುರುತ್ತಿವೆ. ‘ಹೂವೆಲ್ಲಾ ಉದುರಿದರೆ ಕಾಯಿ ಕಟ್ಟುವುದು ಮತ್ತು ಇಳುವರಿ ಬರುವುದು ಹೇಗೆ? ಈಗ ಹತ್ತಿ ಬೆಳೆಯೂ ಕೈಕೊಡುವ ಭಯ ಕಾಡುತ್ತಿದೆ’ ಎಂದು ರೈತರು ಅಲವತ್ತುಕೊಂಡರು.

ಜಮೀನಿನಲ್ಲಿ ನೀರು ನಿಲ್ಲುವುದರಿಂದ ಹತ್ತಿ ಬೆಳೆ ಕೆಂಬಣ್ಣಕ್ಕೆ ತಿರುಗಿ, ಸಸಿ ಸಾಯುತ್ತವೆ. ಮೊದಲು ಸಾಧ್ಯವಾದಷ್ಟು ನೀರು ಹೊರಹೋಗುವ ವ್ಯವಸ್ಥೆ ಮಾಡಬೇಕು. ನಂತರ ಒಂದು ಎಕೆರೆಗೆ ನೈಟ್ರೋಜನ್, ಪಾಸ್ಪರಸ್, ಪೊಟ್ಯಾಶಿಯಂ (19:19:19) 1 ಕೆಜಿ ಹಾಗೂ ಮೆಗ್ನೀಶಿಯಂಸಲ್ಫೇಟ್ 1 ಕೆಜಿ ಮಿಶ್ರಣ ತಯಾರಿಸಿಕೊಂಡು ಮೂರು ದಿನಗಳಲ್ಲಿ ಎರಡು ಬಾರಿ ಸಸಿಗಳಿಗೆ ಸಿಂಪಡಿಸಿದರೆ ಸಸಿಗೆ ಶಕ್ತಿ ಸಿಗುತ್ತದೆ.


ಕಾಯಿಕೊಳೆತ, ಚುಕ್ಕೆ ಮೂಡಿದರೆ ಕಾಪರ್ ಆಕ್ಸಿಕ್ಲೋರೈಡ್ 600 ಗ್ರಾಂ. ಅಥವಾ ಎಕ್ಸಕನೋಜೋಲ್ ಮತ್ತು ಜೈನಬ್ ಮಿಶ್ರಣದ 400 ಗ್ರಾಂ.ನ್ನು 200 ಲೀ. ನೀರಲ್ಲಿ ಕರಗಿಸಿ 1 ಎಕರೆಗೆ ಸಿಂಪಡಿಸಬೇಕು. ಬೇರು ಕೊಳೆತ ಅಥವಾ ನೆಟ್ಟೆರೋಗಕ್ಕೆ ಕಾರ್ಬನ್ ಡೈಜಿಮ್ ಅಥವಾ ಪ್ರಫಿಕೋನೋಜೋಲ್ ಅನ್ನು ರೋಗಪೀಡಿತ ಸಸಿ ಮತ್ತು ಸುತ್ತಲಿನ ಸಸಿಗಳಿಗೆ 150 ಮಿ.ಲೀ ಮಿಶ್ರಣವನ್ನು ಕಾಂಡಕ್ಕೆ ನೀಡುವುದರಿಂದ ಹತ್ತಿ ಬೆಳೆ ನಾಶವನ್ನು ತಡೆಯಬಹುದು ಎಂದು ಕೃಷಿ ಮಹಾವಿದ್ಯಾಲಯದ ಡಾ.ಅಶ್ವತ್ಥನಾರಾಯಣ ತಿಳಿಸುತ್ತಾರೆ.

***

ನಮ್ಮ 12 ಎಕರೆ ಜಮೀನಿನಲ್ಲಿ ಹತ್ತಿ ನಾಟಿ ಮಾಡಿದ್ದೆವು ಈಗ 4 ಎಕರೆ ಮಾತ್ರ ಉಳಿದಿದ್ದು, ಮಳೆಯಿಂದ ಬೇರು ಕೊಳೆತು ಬೆಳೆ ನಾಶವಾಗಿದೆ
-ಶಂಕರ ಎಲೆಕೋಟಿ, ರೈತ

***

ಮಳೆ ಮತ್ತು ಶೀತ ವಾತಾವರಣದಿಂದಾಗಿ ಹತ್ತಿ ಹೂವಿನಲ್ಲಿ ಹನಿಗಳು ಸೇರಿ ಕೊಳೆತು ಉದುರುತ್ತಿವೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ
-ಭೀಮಶಪ್ಪ ಕಂದಕೂರ, ಅನಪುರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT