ಹನುಮ ಮಾಲಾ ಶೋಭಾಯಾತ್ರೆ

ಯಾದಗಿರಿ: ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಹನುಮ ಮಾಲಾ ವೃತ ಯುವಕರಿಂದ ಭಾನುವಾರ ಶೋಭಾ ಯಾತ್ರೆ ನಡೆಯಿತು.
ಯಾದಗಿರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಯುವಕರು ಹನುಮ ಮಾಲಾ ಧಾರಣೆ ಮಾಡಿದ್ದರು. ಹನುಮ ಹುಟ್ಟಿದ ಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ಮಾಲಾ ಧರಿಸಿದ ಯುವಕರು 6 ಬಸ್‌ಲ್ಲಿ ಕೊಪ್ಪಳ ಅಂಜನಾದ್ರಿಗೆ ತೆರಳಿದರು.
ಮುಖ್ಯ ರಸ್ತೆ ಮೇಲೆ ಮಾಲಾ ಧಾರೆ ಯುವಕರು ಯಾತ್ರೆ ಸಂದರ್ಭದಲ್ಲಿ ವಡಗೇರಾ ಠಾಣೆ ಸೂಕ್ತ ಪೊಲೀಸ್ ಸಿಬ್ಬಂದಿ, ಒಂದು ಮೀಸಲು ಪಡೆ ವಾಹನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.