ಸೋಮವಾರ, ಜನವರಿ 24, 2022
29 °C

ಯಾದಗಿರಿ | ಬೇವಿನ ಮರದಲ್ಲಿ ನೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಹೂಲಗೇರಿ ಹತ್ತಿರದ ಪುರತಗೇರಿ ಗ್ರಾಮದಲ್ಲಿನ ಬೇವಿನ ಮರವೊಂದರಲ್ಲಿ ಶನಿವಾರ ಬೆಳಿಗ್ಗೆಯಿಂದ ಹಾಲಿನಂತಹ ನೊರೆ ಸುರಿಯುತ್ತಿರುವುದನ್ನು ಸಾರ್ವಜನಿಕರು ತಂಡವಾಗಿ ಬಂದು ನೋಡುತ್ತಿರುವುದು ಕಂಡು ಬಂತು.

ಬೆಳಗಿನ ಜಾವದಿಂದ ಒಂದೇ ಸಮನೆ ಮರದಲ್ಲಿ ಹಾಲು ಬರುತ್ತಿದ್ದು, ನಮಗೆ ವಿಸ್ಮಯ ಮೂಡಿಸಿದೆ. ಇದು ಮರದಲ್ಲಿ ನಡೆಯುವ ಒಂದು ಚಟುವಟಿಕೆ ಎಂದು ತಿಳಿದರೂ ಕುತೂಹಲಕ್ಕಾಗಿ ಜನ ಬರುತ್ತಿದ್ದಾರೆ ಎಂದು ಹೂಲಗೇರಿ ಗ್ರಾಮದ ಶಿವು ಹೊರಪೇಟಿ ತಿಳಿಸಿದರು.

ಎಲ್ಲ ಮರಗಳಲ್ಲಿನ ಬೇರುಗಳು ನೀರನ್ನು ಕೆಳಗಿನಿಂದ ಮೇಲಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತವೆ. ಇದರಲ್ಲಿ ಇರುವ ಕೋಶಗಳು ಮರದ ಎಲ್ಲ ರಂಬೆ ಕೊಂಬೆಗಳಿಗೆ ನೀರನ್ನು ರವಾನಿಸುತ್ತವೆ. ಹೀಗೆ ನೀರು ಪೂರೈಸುವ ಕೋಶಗಳು ಅಪರೂಪಕ್ಕೆ ಎಂಬಂತೆ ನಾಶವಾದಾಗ, ಇಂಥ ಘಟನೆಗಳು ನಡೆಯುತ್ತವೆ. ಹೀಗೆ ಕೋಶಗಳು ತನ್ನ ಕ್ರಿಯೆಯನ್ನು ಕಡಿಮೆ ಮಾಡಿದಾಗ ಮರದ ಒಳಗಿರುವ ನೀರಿನ ಅಂಶ ಹೊರಗೆ ಬರುತ್ತದೆ. ಸಹಜವಾಗಿ ಮರದಲ್ಲಿ ಬುರುಗು ಇರುವುದರಿಂದ, ಬುರುಗು ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ ಎಂದು ಜೀವವಿಜ್ಞಾನ ಶಿಕ್ಷಕ ಶಂಕ್ರಪ್ಪ ತಳವಾರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು