ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯರಗೋಳ | ಬಿಡದೆ ಸುರಿಯುತ್ತಿರುವ ಮಳೆ: ಚರಂಡಿಗಳಾದ ರಸ್ತೆಗಳು

Published 1 ಸೆಪ್ಟೆಂಬರ್ 2024, 15:27 IST
Last Updated 1 ಸೆಪ್ಟೆಂಬರ್ 2024, 15:27 IST
ಅಕ್ಷರ ಗಾತ್ರ

ಯರಗೋಳ: ಶನಿವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ, ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದೆ.

ಮಳೆಯಿಂದ ಹೂಲ, ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು. ಕೆರೆಯ ಅಂಗಳದಂತೆ ಭಾಸವಾಗುತ್ತಿದೆ. ಮೋಡ ಮುಸುಕಿದ ವಾತಾವರಣ, ತಂಪಾದ ಗಾಳಿಯಿಂರ, ಚಿಕ್ಕ ಮಕ್ಕಳಿಗೆ, ವೃದ್ಧರಿಗೆ ಅನಾರೋಗ್ಯ ಕಾಡುತ್ತಿದೆ.

ಕಂಚಗಾರಹಳ್ಳಿ ಗ್ರಾಮದ ಕೆರೆ ತುಂಬಿದ್ದು, ಯುವಕರು ಮೀನು ಹಿಡಿಯುತ್ತಿದ್ದಾರೆ. ಯರಗೋಳ ಗ್ರಾಮದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದು ಸಂಚಾರಕ್ಕೆ ತೊಂದರೆ ಆಗಿದೆ ಎಂದು ಗ್ರಾಮದ ಹನುಮಂತ ತಳವಾರ ತಿಳಿಸಿದರು.

ಅಲ್ಲಿಪುರ ಗ್ರಾಮದಲ್ಲಿ ಮಳೆಯಿಂದಾಗಿ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು ಶಾಲೆಗೆ, ಚರ್ಚೆಗೆ ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಸಾಯಿಬಣ್ಣ ಪ್ರಜಾವಾಣಿ ಗೆ ತಿಳಿಸಿದರು.

ಮಾಟ್ನಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಗ್ರಾಮದಲ್ಲಿ ನೀರು ಸಂಗ್ರಹವಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೊನೆಗೇರಾ ಗ್ರಾಮದ ಮಧ್ಯ ಇರುವ ಚರಂಡಿ ತುಂಬಿದ್ದು ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಕೊಟಗೇರಾ ಜಲಪಾತದಲ್ಲಿ ನೀರು ಹರಿಯುತ್ತಿದ್ದು ರಮಣಿಯಾವಾಗಿ ಕಾಣುತ್ತಿದೆ. ಹತ್ತಿಕುಣಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. ಬಂದಳ್ಳಿ, ಯಡ್ಡಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಆವರಿಸಿದೆ.

ಅಬ್ಬೆತುಮಕೂರು, ಹೆಡಗಿ ಮುದ್ರಾ, ಠಾಣೆಗುಂದಿ, ಬೊಮ್ ಚಟ್ನಳ್ಳಿ, ಕಾನಳ್ಳಿ, ಕ್ಯಾಸನಪ್ಪನ ಹಳ್ಳಿ, ಅರಿಕೇರಾ. ಬಿ, ಮಲ್ಕಪ್ಪನಹಳ್ಳಿ, ತಳಕ್, ಬೆಳಗೇರಾ ಗ್ರಾಮಗಳಲ್ಲಿ ಮಳೆಯಾಗಿದೆ.ಕಟ್ಟಿಗೆ ಶಹಪುರ, ಹತ್ತಿಕುಣಿ, ವಡ್ನಳ್ಳಿ, ಚಾಮನಹಳ್ಳಿ ಗ್ರಾಮಗಳಲ್ಲಿ ಜೋರಾದ ಮಳೆಯಾಗಿದೆ, ಹೊಲ, ಹಳ್ಳ, ಕೆರೆಗಳಲ್ಲಿ ನೀರು ಹರಿದಾಡುತ್ತಿದೆ.

ಬಹುತೇಕ ಗ್ರಾಮಗಳಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿದು, ಕೆಸರು ಗದ್ದೆಗಳಾಗಿವೆ, ಗೋಡೆಗಳು ಬಿರುಕು ಬಿಟ್ಟಿವೆ, ದೊಡ್ಡ ವಾಹನ, ಬೈಕು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ, ವಿದ್ಯುತ್ ಸಂಪರ್ಕ ಬಹುತೇಕ ಗ್ರಾಮಗಳಲ್ಲಿ ಕಡಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT