ಆನೂರು.ಕೆ(ಸೈದಾಪುರ): ಮೂರು ಸೀಮೆಗಳ ರೈತಾಪಿ ವರ್ಗ ಹಾಗೂ ಸರ್ವ ಧರ್ಮಗಳ ಸಾಮರಸ್ಯದ ಕೊಂಡಿಯಾಗಿ ನೆಲೆ ನಿಂತಿರುವ ಹುಡೆದ ಯಲ್ಲಮ್ಮನ ಜಾತ್ರೆಯು ಸಾವಿರಾರೂ ಭಕ್ತರ ನಡುವೆ ಸಡಗರ ಸಂಭ್ರಮದೊಂದಿಗೆ ಬುಧವಾರ ಅದ್ದೂರಿಯಾಗಿ ಜರುಗಿತು.

ಆನೂರ.ಕೆ, ಬೆಳಗುಂದಿ, ಹೆಗ್ಗಣಗೇರಾ ಮತ್ತು ಸಾವೂರು ಸೀಮೆಯ ಅಡವಿ ಮಧ್ಯದಲ್ಲಿ ನೆಲೆಸಿರುವ ಯಲ್ಲಮ್ಮ, ಹುಡೇದ ಯಲ್ಲಮ್ಮದೇವಿ ಎಂದು ಪ್ರಸಿದ್ದಿ ಪಡೆದಿದ್ದಾಳೆ. ಜಾತ್ರೆಗೆ ಎಲ್ಲ ಧರ್ಮದ ಜನರು ಮತ್ತು ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿ, ಎಲ್ಲರೂ ಪ್ರೀತಿ, ಬಾಂಧವ್ಯ ಸಾಮರಸ್ಯದೊಂದಿಗೆ ಶ್ರದ್ಧಾ ಭಕ್ತಿಯಿಂದ ದೇವಿಗೆ ನಮಿಸಿ ಜಾತ್ರೆಯ ಉತ್ಸವವನ್ನು ನೆರವೇರಿಸಿದರು.

ಬೆಳಿಗ್ಗೆ ಪ್ರಾರಂಭವಾಗಿ ಸಂಜೆ ಮುಗಿಯುವ ಒಂದು ದಿನದ ಜಾತ್ರೆಗೆ ನೇರೆ ಗ್ರಾಮಗಳು ಮಾತ್ರವಲ್ಲದೆ ಮುಂಬೈ, ಬೆಂಗಳೂರು ಹಾಗೂ ಹೈದಾರಬಾದ್ಗಳಂತಹ ನಗರ ಪ್ರದೇಶಗಳಿಂದಲೂ ಸಾಕಷ್ಟು ಜನ ಆಗಮಿಸುತ್ತಾರೆ.

ಸಹಭೋಜನ: ಜಾತ್ರೆಗೆ ಬರುವ ಭಕ್ತರು ಮನೆಯಲ್ಲಿ ತಯಾರಿಸಿದ ಎಳ್ಳು ಹಚ್ಚಿದ ಸಜ್ಜೆರೊಟ್ಟಿ, ಎಣ್ಣೆ ಬದನೆಕಾಯಿ ಪಲ್ಯ, ಕಾಳು ಪಲ್ಯ, ಚಟ್ನಿ, ಸೇಂಗಾ ಹೋಳಿಗೆ, ಕಡಬು, ಹಪ್ಪಳ, ಅನ್ನ, ಸಾರು ಸೇರಿದಂತೆ ವಿವಿಧ ರೀತಿಯ ಊಟವನ್ನು ಬುತ್ತಿ ಕಟ್ಟಿಕೊಂಡು ಎತ್ತಿನ ಬಂಡಿ, ಟ್ರ್ಯಾಕ್ಟರ್, ಆಟೊ, ದ್ವಿಚಕ್ರ, ಕಾರುಗಳಲ್ಲಿ ಆಗಮಿಸಿದರು. ಇನ್ನು ಹತ್ತಿರದ ಕೆಲ ಗ್ರಾಮಗಳಿಂದ ಭಕ್ತರು ನಡೆದುಕೊಂಡು ಬಂದಿದ್ದರು. ಜಾತ್ರೆಗೆ ಬಂದು ದೇವಿಗೆ ಕಾಯಿ-ಕರ್ಪೂರದೊಂದಿಗೆ ಪೂಜೆ ಮತ್ತು ನೈವೇದ್ಯವನ್ನು ಅರ್ಪಿಸಿ ನಂತರ ಕುಟುಂಬ ಹಾಗೂ ನೆರೆಹೊರೆಯವರು ಒಟ್ಟಿಗೆ ಕೂತು ಊಟವನ್ನು ಮಾಡಿದರು.

ವ್ಯಾಪಾರ-ವಹಿವಾಟು ಜೋರು: ಕೇವಲ ಒಂದು ದಿನದ ಜಾತ್ರೆಯಾಗಿದ್ದರಿಂದ ಮಕ್ಕಳ ಆಟಿಕೆ ಸಾಮಾನು, ಕಡಲೆ ಮಂಡಳ, ಖಾರಾ, ಭಜಿ, ಪಾತ್ರೆಗಳು ಸೇರಿದಂತೆ ಹಲವು ಬಗೆಯ ವ್ಯಾಪಾರ ಜೋರಾಗಿ ನಡೆಯಿತು.

ಜಾತ್ರೆಯ ನಿಮಿತ್ತ ಸಂಪೂರ್ಣ ದೇವಸ್ಥಾನವನ್ನು ಬಣ್ಣ ಬಣ್ಣದ ಚೆಂಡುಹೂಗಳಿಂದ ಶೃಂಗಾರ ಮಾಡಿರುವುದು ವಿಶೇಷವಾಗಿತ್ತು.

ಪೊಲೀಸ್ ಸರ್ಪಗಾವಲು: ಜಾತ್ರೆಯಲ್ಲಿ ನಡೆಯುವ ಅಹಿತಕರ ಘಟನೆಯನ್ನು ತಡೆಯಲು ಸೈದಾಪುರ ಪೊಲೀಸ್ ಠಾಣೆಯ ಪಿಐ ಹಾಗೂ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನಗಳ ದಟ್ಟಣೆ, ದೇವಸ್ಥಾನ, ಗರ್ಭಗುಡಿ, ಜನದಟ್ಟಣೆ ಇರುವ ಕಡೆ ಸೂಕ್ತ ಭದ್ರತೆಯನ್ನು ನೀಡಿದರು.

ಮಧ್ಯಾಹ್ನ ಊಟದ ನಂತರ ಜಾತ್ರೆಯಲ್ಲಿ ಜೋಕಾಲಿ ಜೀಕುತ್ತ ಮಕ್ಕಳು, ದೊಡ್ಡವರು ಸಂಭ್ರಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಸಂಜೆಯಾಗುತ್ತಿದ್ದಂತೆ ಜಾತ್ರೆಯಲ್ಲಿನ ಮಂಡಾಳ, ಜಿಲೇಬಿ, ಖಾರಾ, ಕಬ್ಬು ಖರೀದಿಸಿ ಮನೆಗೆ ತೆರಳಿದರು. ಒಟ್ಟಿನಲ್ಲಿ ಕುಟುಂಬಸ್ಥರೊಂದಿಗೆ ಒಂದು ದಿನದ ಪ್ರವಾಸ ಕೈಗೊಂಡು ದೇವಿಯ ದರ್ಶನ ಪಡೆದು ಸಂತಸದೊಂದಿಗೆ ಮನೆಗೆ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.