ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: 286 ಸ್ಥಾನಗಳಿಗೆ ಚುನಾವಣೆ

ಸಿದ್ಧತೆಯಲ್ಲಿ ತೊಡಗಿರುವ ತಾಲ್ಲೂಕು ಆಡಳಿತ
Last Updated 19 ಡಿಸೆಂಬರ್ 2020, 3:34 IST
ಅಕ್ಷರ ಗಾತ್ರ

ಹುಣಸಗಿ: ಹುಣಸಗಿ ನೂತನ ತಾಲ್ಲೂಕು ಕೇಂದ್ರವಾದ ಬಳಿಕ ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಸುಸೂತ್ರವಾಗಿ ನಡೆಯುವಂತಾಗಲು ತಾಲ್ಲೂಕು ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಹುಣಸಗಿ ಹಾಗೂ ಕೊಡೇಕಲ್ಲ ಹೋಬಳಿ ಕೇಂದ್ರಗಳು ಇವೆ. 18 ಗ್ರಾ.ಪಂಗಳ 82 ಹಳ್ಳಿಗಳು ಒಳಪಟ್ಟಿವೆ. ತಾಲ್ಲೂಕಿನಲ್ಲಿ 106 ಕ್ಷೇತ್ರಗಳನ್ನು ಹಾಗೂ 159 ಮತಗಟ್ಟೆಗಳನ್ನು ಮಾಡಲಾಗಿದೆ. ಒಟ್ಟು 15 ಕ್ಷೇತ್ರಗಳಲ್ಲಿ 81 ಅಭ್ಯರ್ಥಿಗಳ ಅವಿರೋಧ ಆಯ್ಕೆ ಖಚಿತವಾಗಿದ್ದು, ಜುಮಾಲಪುರ ತಾಂಡಾದ ಜನ 2 ಸ್ಥಾನಗಳಿಗೆ ಚುನಾವಣೆ ಬಹಿಷ್ಕರಿಸಿದ್ದಾರೆ. 106 ಕ್ಷೇತ್ರಗಳಲ್ಲಿ 651 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮಾಹಿತಿ ನೀಡಿದ್ದಾರೆ.

ಕೆಲ ಗ್ರಾಮಗಳ ಮತಗಟ್ಟೆಗಳಲ್ಲಿ 1,100 ಕ್ಕೂ ಹೆಚ್ಚು ಮತದಾರರು ಇದ್ದುದರಿಂದಾಗಿ ಕೋವಿಡ್-19 ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ಮತಗಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು
ವಿವರಿಸಿದರು.

ಹೊಸ ತಾಲ್ಲೂಕು ಕೇಂದ್ರವಾಗಿದ್ದರೂ ಯಾವುದೇ ತೊಂದರೆಯಾಗದಂತೆ ಈಗಾಗಲೇ ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನಿಡಲಾಗಿದೆ. ಚುನಾವಣೆಗೆ ಬೇಕಾಗುವ ಎಲ್ಲ ಸಾಮಗ್ರಿಗಳ ಆಯಾ ಮತಗಟ್ಟೆಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಳದಲ್ಲಿ ವ್ಯವಸ್ಥೆ ಕೈಗೊಳ್ಳುತ್ತಿದ್ದ ಉಪ ತಹಶೀಲ್ದಾರ್ ಮಹಾದೇವಪ್ಪ ಗೌಡ ಬಿರಾದಾರ ಹೇಳಿದರು.

ಕ್ಷಿಪ್ರ ಸಂಚಾರಿ ದಳ, 9 ಸೆಕ್ಟರ್ ಅಧಿಕಾರಿಗಳು, 18 ಚುನಾವಣಾಧಿಕಾರಿಗಳು, 21 ಸಹಾಯಕ ಚುನಾವಣಾಧಿಕಾರಿಗಳು, 191 ಮತಗಟ್ಟೆ ಅಧಿಕಾರಿಗಳು, 191 ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ 420 ಇತರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹೆಬ್ಬಾಳ ಗ್ರಾ.ಪಂ 3 ಸ್ಥಾನ, ಕಾಮನಟಗಿ ಗ್ರಾ.ಪಂ 7 ಸ್ಥಾನ, ಬೈಲಕುಂಟಿ 2 ಸ್ಥಾನ, ರಾಜನಕೋಳೂರ 5 ಸ್ಥಾನ, ಕೊಡೇಕಲ್ಲ 22 ಸ್ಥಾನ, ಮಾರನಾಳ 1 ಸ್ಥಾನ, ಜೋಗುಂಡಬಾವಿ 9 ಸ್ಥಾನ, ಬರದೇವನಾಳ 3 ಸ್ಥಾನ, ಹಗರಟಗಿ 2 ಸ್ಥಾನ, ಮಾಳನೂರ 2 ಸ್ಥಾನ, ವಜ್ಜಲ 13 ಸ್ಥಾನ, ಕೋಳಿಹಾಳ 7 ಸ್ಥಾನ, ಅಗ್ನಿ 4 ಸ್ಥಾನ ಹಾಗೂ ಮುದನೂರ (ಕೆ) 1 ಸ್ಥಾನಗಳಿಗೆ ಅವಿರೋಧ ಆಯ್ಕೆ ಖಚಿತವಾಗಿದೆ.

**

ಗ್ರಾಮ ಪಂಚಾಯಿತಿ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ

- ವಿನಯಕುಮಾರ ಪಾಟೀಲ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT