ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ | ‘ಸ್ವದೇಶಿ ಬಟ್ಟೆಗಳ ಬಳಕೆಗೆ ಒತ್ತು ನೀಡೋಣ’

Published : 7 ಆಗಸ್ಟ್ 2024, 14:25 IST
Last Updated : 7 ಆಗಸ್ಟ್ 2024, 14:25 IST
ಫಾಲೋ ಮಾಡಿ
Comments

ಹುಣಸಗಿ: ‘ಯುವವಕರು ಸ್ವದೇಶಿ ಉತ್ತನ್ನಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶ ಕಾಳಜಿ ಮೆರೆಯುಬೇಕು’ ಎಂದು ನೇಕಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೀರಸಂಗಪ್ಪ ಹಾವೇರಿ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಈ ಹಿಂದೆ ನಮ್ಮ ಹಿರಿಯರು ಎಲ್ಲರೂ ಸ್ವದೇಶಿ ಬಟ್ಟೆಗಳನ್ನೇ ಬಳಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಸ್ವದೇಶಿ ಖಾದಿ ಬಟ್ಟೆಗಳ ಉಡುಗೆ ಕಡಿಮೆಯಾಗಿದೆ. ಇದರಿಂದಾಗಿ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ನೇಕಾರ ಕುಟುಂಬಗಳು ಕೆಲಸ ಇಲ್ಲದೇ ಸಂಕಷ್ಟದಲ್ಲಿವೆ. ಸರ್ಕಾರ ನೇಕಾರರ ಕುಟುಂಬಗಳಿಗೆ ಸೂಕ್ತ ನೆರವು ನೀಡುವ ಮೂಲಕ ನೇಕಾರಿಕೆಗೆ ಉತ್ತೇಜನ ನೀಡುವ  ಅಗತ್ಯವಿದೆ’ ಎಂದರು.

ಜನಕ ಪದವಿ ಕಾಲೇಜು ಪ್ರಾಚಾರ್ಯ ಸೋಮಶೇಖರ ಪಂಜಗಲ್ಲ ಮಾತನಾಡಿ, ದೇಶ ಹಾಗೂ ನಮ್ಮತನವನ್ನು ಎತ್ತಿ ಹಿಡಿಯುವಂತಾಗಲು ಸಾಧ್ಯವಾದಷ್ಟು ಸ್ವದೇಶ ವಸ್ತುಗಳನ್ನು ನಮ್ಮ ಮನೆಯಲ್ಲಿ ನಿತ್ಯ ಬಳಕೆ ಮಾಡೋಣ ಎಂದರು.

ಕಸಾಪ ವಲಯಾಧ್ಯಕ್ಷ ಕೋರಿಸಂಗಯ್ಯ ಗಡ್ಡದ ಹಾಗೂ ಹಿರಿಯರಾದ ಬಸಣ್ಣ ಗೊಡ್ರಿ ಮಾತನಾಡಿ, ಕೈಮಗ್ಗ ದಿನಾಚರಣೆ ಹಾಗೂ 1915 ರಲ್ಲಿ ಕೊಲ್ಕತ್ತಾ ಟೌನ ಹಾಲ್‌ನಲ್ಲಿ ನಡೆದ ಸ್ವದೇಶ ಉತ್ಪನ್ನ ಬಲವರ್ಧನೆ ಹಾಗೂ ಮದ್ರಾಸ್ ವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದ ಕುರಿತು ವಿವರವಾಗಿ ಮಾತನಾಡಿದರು.

ಸಾನ್ನಿಧ್ಯವನ್ನು ಕೊಡೇಕಲ್ಲ ಮಹಲಿನ ಮಠದ ವೃಷಬೇಂದ್ರ ಅಪ್ಪ ವಹಿಸಿ ಮಾತನಾಡಿದರು.

ತಾಲ್ಲೂಕು ಅಧ್ಯಕ್ಷ ಸಂಗಣ್ಣ ಡಂಬಳ, ಕೊಡೇಕಲ್ಲ ನೇಕಾರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಣ್ಣ ಹಾವೇರಿ, ರವೀಂದ್ರ ಅಂಗಡಿ, ಸಂಗನಬಸಪ್ಪ ಅಡ್ಡಿ, ಮಲ್ಲಣ್ಣ ಹೂಗಾರ, ಸಂಗಪ್ಪ ಮಂಟೆ, ಚಂದ್ರಶೇಖರ ಹೊಕ್ರಾಣಿ, ತಿಪ್ಪಣ್ಣ ದ್ಯಾಮನಹಾಳ, ರಾಜು ಜಾಲಿಗಿಡದ, ಬಸವರಾಜ ಪೂಜಾರಿ, ಸಂಗನಬಸಪ್ಪ ಅಡ್ಡಿ, ಬಸಪ್ಪ ಗೋನವಾಟ್ಲ, ಬಸವರಾಜ ಪಂಗಜಲ್ಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT