ವಿಬಿಆರ್ ಮುದ್ನಾಳ ಆಸ್ಪತ್ರೆಯಲ್ಲಿ ಐಸಿಯು ಸೌಲಭ್ಯ: ಡಾ.ವೀರಬಸವಂತರೆಡ್ಡಿ ಮುದ್ನಾಳ

ಯಾದಗಿರಿ: ವಿಬಿಆರ್ ಮುದ್ನಾಳ ಆಸ್ಪತ್ರೆಯಲ್ಲಿ ಸಿಪಾಕಾ ಸಂಸ್ಥೆ ಸಹಯೋಗದಲ್ಲಿ ಮೇ 21ರಂದು ಐಸಿಯು ಕೇರ್ ಸೆಂಟರ್ ಉದ್ಘಾಟನೆ ನೆರವೇರಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಸಿಪಾಕಾ ಸಂಸ್ಥೆಯ ಎಂಡಿ ಡಾ.ರಾಜಾ ಅಮರನಾಥ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ಥಳೀಯ ಹಾಗೂ ಶಹಾಪುರ ಶಾಸಕರು ಭಾಗವಹಿಸಲಿದ್ದಾರೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ವಿಬಿಆರ್ ಅಗತ್ಯ ಸೇವೆ ಒದಗಿಸಿದೆ. ಆದರೆ, ಐಸಿಯು ಕೊರತೆ ಎದುರಾಗಿತ್ತು. ಯಾದಗಿರಿಯಲ್ಲಿ ಐಸಿಯು ಸೌಲಭ್ಯ ಸರಿದೂಗಿಸಲು ಗ್ರಾಮೀಣ ಭಾಗದಲ್ಲಿ ಐಸಿಯು ಸೇವೆ ಒದಗಿಸಿರುವ ಸಿಪಾಕಾ ಎನ್ನುವ ಸಂಸ್ಥೆಯೊಂದಿಗೆ ಸಹಯೋಗದಲ್ಲಿ ವಿಬಿಆರ್ನಲ್ಲಿ10 ಐಸಿಯು ಬೆಡ್ ಸ್ಥಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೈದರಾಬಾದ್ , ಬೆಂಗಳೂರು ನಂಥ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಐಸಿಯು ಚಾರ್ಜ್ ದಿನವೊಂದಕ್ಕೆ ₹1ಲಕ್ಷ ಮಾಡುತ್ತಾರೆ. ಆದರೆ, ಯಾದಗಿರಿಯ ವಿಬಿಆರ್ನಲ್ಲಿ ₹10 ರಿಂದ 20 ಸಾವಿರವರೆಗೆ ಮಾತ್ರ ಮಾಡಲಾಗುವುದು. ಜೊತೆಗೆ ಅಗತ್ಯ ಸೇವೆ ಒದಗಿಸಲಾಗುವುದು. ಮಾನವೀಯತೆಯ ಆಧಾರದ ಮೇಲೆ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಡಾ.ಪಲ್ಲಾ ಅಭಿಷೇಕರೆಡ್ಡಿ, ಡಾ ಬಸವರಾಜ್, ಡಾ ಸುನೀಲ್, ಡಾ.ಪ್ರಶಾಂತ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.