ಭಾನುವಾರ, ಆಗಸ್ಟ್ 14, 2022
20 °C
ನಾರಾಯಣಪುರ: ರಾಜಿ ಸಂಧಾನಕ್ಕೆ ಬಂದ ತೀವ್ರ ಗಾಯಗೊಂಡ ನಾಲ್ವರ ದುರ್ಮರಣ

ಬೆಂಕಿ ಹಚ್ಚಿದ ಅಮಾನುಷ ಘಟನೆ: ಮತ್ತಿಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರಾಯಣಪುರ: ಪಟ್ಟಣದ ಛಾಯಾ ಬಡಾವಣೆಯಲ್ಲಿ ದಂಪತಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನಕ್ಕೆ ಬಂದಿದ್ದವರನ್ನು ಕೋಣೆಯಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರು ಸಾವನಪ್ಪಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ನಾಲ್ಕೂ ಜನರು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಗಪ್ಪ ಚನ್ನಪ್ಪ ಹಗರಗೊಂಡ (35) ಮತ್ತು ಶರಣಪ್ಪ ಸರೂರ್ (65) ಬುಧವಾರ ಮೃತಪಟ್ಟಿದ್ದರೆ, ಸಿದ್ರಾಮಪ್ಪ ಮುರಾಳ (65) ಮತ್ತು ಮುತ್ತಪ್ಪ ಮುರಾಳ (40) ಗುರುವಾರ ಸಾವನ್ನಪ್ಪಿದ್ದಾರೆ.

ಆರೋಪಿ ಶರಣಪ್ಪ ಈರಣ್ಣ ಹುಲಿಗೆಮ್ಮ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ರಾಜಿ ಪಂಚಾಯಿತಿ ನಡೆಸಲು ಬುಧವಾರ ಹುಲಿಗೆಮ್ಮ ತಂದೆ ಸಿದ್ರಾಮಪ್ಪ ಮುರಾಳ ಸೇರಿದಂತೆ ಸಂಬಂಧಿಕರಾದ ನಾಗಪ್ಪ ಚನ್ನಪ್ಪ ಹಗರಗೊಂಡ, ಶರಣಪ್ಪ ಸರೂರ್, ಮುತ್ತಪ್ಪ ಮುರಾಳ ಅವರು ಪಂಚಾಯಿತಿಗೆ ಬಂದಿದ್ದರು. ಅವರನ್ನು ಮಾತನಾಡುವ ನೆಪದಲ್ಲಿ ಕೋಣೆಯಲ್ಲಿ ಕೂಡಿ ಹಾಕಿ ಬಾಗಿಲು ಕೀಲಿ ಹಾಕಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರಿಂದ ನಾಲ್ವರು ತೀವ್ರ ಗಾಯಗೊಂಡು ಸಾವು–ನೋವಿನ ಮಧ್ಯೆ ನರಳಾಡುತ್ತಿದ್ದರು.

ವಿಷಯ ತಿಳಿದ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ಜ್ವಾಲೆಯಿಂದ ಗಂಭೀರ ಗಾಯಗೊಂಡಿರುವ ನಾಲ್ವರನ್ನು ಸ್ಥಳೀಯ ನೆರವಿನೊಂದಿಗೆ ಲಿಂಗಸೂಗುರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಮಾರ್ಗ ಮಧ್ಯೆ ನಾಗೇಶ ಚನ್ನಪ್ಪ (35) ಸಾವನಪ್ಪಿದರೆ, ಶರಣಪ್ಪ ಸರೂರ (65) ರಾಯಚೂರು ರಿಮ್ಸ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಆರೋಪಿ ಶರಣಪ್ಪನಿಗೆ ಹೆಣ್ಣು ಕೊಟ್ಟ ಮಾವನಾದ ಸಿದ್ದರಾಮಪ್ಪ ಮುರಾಳ (65) ಹಾಗೂ ಮುತ್ತಪ್ಪ ಮುರಾಳ (40) ಇಬ್ಬರು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಾಗ ಬುಧವಾರ ತಡರಾತ್ರಿ ವೇಳೆಗೆ ಇಬ್ಬರು ಚಿಕಿತ್ಸೆಗೆ ಸ್ಪಂದಿಸಿದೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತ ನಾಲ್ಕು ಜನರ ಶವಗಳ ಪೈಕಿ ನಾಗೇಶ ಎಂಬುವವರ ಶವವನ್ನು ಲಿಂಗಸೂಗುರು ಆಸ್ಪತ್ರೆಯಲ್ಲೇ ಬುಧವಾರ ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಶರಣಪ್ಪ ಸರೂರ, ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಅವರೆಲ್ಲರ ಶವಗಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಮೃತ ಎಲ್ಲಾ ಶವಗಳನ್ನು ಪಡೆದು ಶವಸಂಸ್ಕಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.