ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

Last Updated 6 ಡಿಸೆಂಬರ್ 2020, 5:43 IST
ಅಕ್ಷರ ಗಾತ್ರ

ಯಾದಗಿರಿ: ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಈಡಿಗ ಸೇರಿದಂತೆ ಹಲವು ಉಪಜಾತಿಗಳನ್ನೊಳಗೊಂಡ ಕುಲ ಕಸುಬು ಮಾಡುತ್ತಿರುವ ಈಡಿಗ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರವು ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ಆರ್ಯ ಈಡಿಗ ಸಮಾಜ ಹಾಗೂ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿದ್ದರೂ ಜಿಲ್ಲಾ ಕೇಂದ್ರದಲ್ಲಿ ಮದುವೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಒಂದು ಸಮುದಾಯ ಭವನ, ವಿದ್ಯಾರ್ಥಿ ವಸತಿ ನಿಲಯ ಇಲ್ಲ. ಸೇಂದಿ ನಿಷೇಧ ಸಮಯದಲ್ಲಿ ಆರ್ಥಿಕ ನಷ್ಟಕ್ಕೊಳಗಾಗಿರುವ ಸಮುದಾಯದವರಿಗೆ ತಮ್ಮ ಆರ್ಥಿಕ ಚೇತರಿಕೆ ಮಾಡಿಕೊಳ್ಳಲು ಸರ್ಕಾರದಿಂದ ಸೌಲಭ್ಯ ಕಲ್ಪಿಸಬೇಕು. ಕುಲ ಕಸುಬನ್ನು ನಂಬಿಕೊಂಡು ಜೀವನ ನಡೆಸುತ್ತಿರುವವರು ಆರ್ಥಿಕ ಜರ್ಝರಿತಕ್ಕೊಳಗಾಗಿ ಹಿಂದುಳಿಯುವಂತಾಗಿದೆ. ಆದ್ದರಿಂದ ಎಸ್ಸಿ, ಎಸ್ಟಿ ಮಾದರಿಯಲ್ಲಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕ ಸಬಲತೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

ಸಮಾಜದ ಜಿಲ್ಲಾಧ್ಯಕ್ಷ ರಾಜಶೇಖರಗೌಡ ವಡಗೇರಾ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಮುಖ್ಯ ಸಂಚಾಲಕ ಮಲ್ಲಯ್ಯ ಗುಂಡಗುರ್ತಿ, ಬಿಎಸ್‍ಎನ್‍ಡಿಪಿ ರಾಜ್ಯಾಧ್ಯಕ್ಷ ಕೆ.ಸೈದಪ್ಪ ಗುತ್ತೇದಾರ, ದೇವೇಂದ್ರಗೌಡ ರಾಚನಳ್ಳಿ, ಹಣಮಂತಿ ಗುತ್ತೇದಾರ, ಭೀಮಯ್ಯ ಮದ್ರಿಕಿ, ಲಕ್ಷ್ಮೀಕಾಂತ ನಿಡಜಂತಿ, ಬಸವರಾಜ ಮುಂಡರಗಿ, ಬನ್ನಯ್ಯ ಕಣೆಕಲ್, ಡಾ.ವೆಂಕಟೇಶ ಬದ್ದೆಪಲ್ಲಿ, ರಾಘವೇಂದ್ರ ಸೈದಾಪುರ, ಬಸವರಾಜ ಕೂಡ್ಲೂರ, ಶ್ರೀನಿವಾಸ ಸುರಪುರ, ಆಂಜನೇಯ ಕಲಾಲ, ವಿಜಯ ರಾಮಸಮುದ್ರ, ಶರಣು ಮಳ್ಳಳ್ಳಿ, ಮೊಗಲಯ್ಯ ಹೊಸಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT