ಭಾನುವಾರ, ಮಾರ್ಚ್ 26, 2023
23 °C

ಸ್ಫೂರ್ತಿದಾಯಕ ಮಹಾನಾಯಕ ಡಾ.ಬಿಆರ್.ಅಂಬೇಡ್ಕರ್ ಧಾರಾವಾಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಪಟ್ಟಣದ ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವನ್ನು ಆಧರಿಸಿದ ಜೀ ಕನ್ನಡ ವಾಹಿನಿಯ ಧಾರಾವಾಹಿ ‘ಮಹಾನಾಯಕ ಡಾ.ಬಿಆರ್.ಅಂಬೇಡ್ಕರ್’ ಚಿತ್ರಕ್ಕೆ ದಲಿತ ಸೇನೆ ಗ್ರಾಮ ಘಟಕದಿಂದ ಪೂಜೆ ಸಲ್ಲಿಸಲಾಯಿತು.

ದಲಿತ ಸೇನೆ ಅಧ್ಯಕ್ಷ ನಿಂಗಪ್ಪ ಕಾಂಬ್ಳೆ ಮಾತನಾಡಿ, ಅಂಬೇಡ್ಕರ್ ಅವರು ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಅಖಂಡ ಭಾರತದಲ್ಲಿ ಮರೆಯಲಾಗದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲ. ಧಾರಾವಾಹಿಯು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರವಾಹಿ ಸರ್ವರಿಗೂ ಸ್ಫೂರ್ತಿ ತುಂಬಲಿದೆ. ಅದರಲ್ಲಿಯು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಅವರಂತೆ ಇಂದಿನ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕಾಗಿದೆ ಎಂದರು.

ಕೆಲವರು ಧಾರಾವಾಹಿ ನಿಲ್ಲಿಸಲು ಬೆದರಿಕೆ ಹಾಕುತ್ತಿದ್ದಾರೆ. ಇಂಥವರಿಗೆ ಹೆದರದೆ ಧಾರಾವಾಹಿಯನ್ನು ಮುಂದುವರಿಸಬೇಕು. ಜೀ ಕನ್ನಡಕ್ಕೆ ನಮ್ಮೆಲ್ಲರ ಬೆಂಬಲ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮರಲಿಂಗಪ್ಪ ಕಟ್ಟಿಮನಿ, ಮಾನಪ್ಪ ಕಟ್ಟಿಮನಿ, ಬಸವರಾಜ ಕಾಂಬ್ಳೆ, ಮಾರುತಿ ಹೊಸಮನಿ, ಭೀಮರಾಯ ದೊಡ್ಡಮನಿ, ಪ್ರಕಾಶ ಬಡಿಗೇರ, ಮಾನಪ್ಪ ಕಾಂಬ್ಳೆ, ಗ್ಯಾನಪ್ಪ ಕಾಂಬ್ಳೆ, ಗಂಗಣ್ಣ ಗೌಂಡಿ, ಸೇರಿದಂತೆ ಪದಾಧಿಕಾರಿಗಳು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.