<p>ಕಲ್ಯಾಣ ಕರ್ನಾಟಕದ ಸಗರ ನಾಡು ಖ್ಯಾತಿಯ ಶಹಾಪುರದ ಬಲಭೀಮೇಶ್ವರ ಮತ್ತು ಸಂಗಮೇಶ್ವರನ ಸನ್ನಿಧಾನದಲ್ಲಿ, ಧಗಧಗಿಸುವ ದೀವಟಿಗೆಗಳನ್ನು ಹಿಡಿದು ಜೋಡಿ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದೀವಟಿಗೆಗಳ ಎರಡು ಸಾಲುಗಳು, ಅಲಂಕೃತ ವಿದ್ಯುತ್ ದೀಪಗಳ ನಡುವೆ ಜೋಡಿ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆಯು ಅಹೋ ರಾತ್ರಿ ಸಾಗಿತು. ರಸ್ತೆಯ ಎರಡು ಬದಿಯಲ್ಲಿನ ಕಟ್ಟಡಗಳು, ಮನೆಯ ಛಾವಣಿಗಳ ಮೇಲೆ ನಿಂತ ಸಾವಿರಾರು ಜನರು ಈ ವೈಭವವನ್ನು ಕಣ್ತುಂಬಿಕೊಂಡರು. <br></p>