ನಾರಾಯಣಪುರ: ಮಣಿಕಂಠನಾಯಕ ಅವರ 18ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮಾಜಿ ಶಾಸಕ ರಾಜುಗೌಡ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚವನಭಾವಿ ಕಬಡ್ಡಿ ತಂಡವು ಪ್ರಥಮ ಸ್ಥಾನ ಗಳಿಸಿದರೆ, ತೋಳದಿನ್ನಿ ಗ್ರಾಮ ದೇವತೆ ಕಬಡ್ಡಿ ತಂಡ ದ್ವಿತೀಯ, ರಿತೀಶ ಎಲೆಕ್ಟ್ರಿಕಲ್ ನಾರಾಯಣಪುರ ತಂಡವು ತೃತೀಯ, ಗ್ರಾಮದೇವತೆ ಗದ್ದೆಮ್ಮದೇವಿ ದೇವರಗಡ್ಡಿ ತಂಡವು ನಾಲ್ಕನೇ ಸ್ಥಾನ ಪಡೆದಿದೆ.
ಎಎನ್ಸಿಸಿ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ವಿವಿಧ ಜಿಲ್ಲೆಗಳ 106 ತಂಡಗಳು ಭಾಗವಹಿಸಿದ್ದವು.
ಲೀಗ್ ಹಂತದಿಂದಲೂ ಉತ್ತಮ ಪದರ್ಶನ ನೀಡಿದ್ದ ಚವನಬಾವಿ ಕಬಡ್ಡಿ ತಂಡ ಹಾಗೂ ತೋಳದಿನ್ನಿ ಕಬಡ್ಡಿ ತಂಡಗಳೆರಡು ಅಂತಿಮ ಪಂದ್ಯದಲ್ಲಿ ರೋಚಕ ಸೆಣಸಾಟ ನಡೆಸಿದವು. ವಿಜೇತ ತಂಡಗಳಿಗೆ ನಗದು, ಟ್ರೋಫಿ ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಮುತ್ತು ಕಬಡರ, ಪ್ರಮುಖರಾದ ಸಂಗಣ್ಣ ತಾಳಿಕೋಟಿ, ವೈ.ಸಿ ಗೌಡರ, ಗದ್ದೆಪ್ಪ ರೋಡಲಬಂಡಾ, ಶಿವಪ್ಪ ಬಿರಾದಾರ, ಆಂಜನೇಯ ದೊರೆ, ಆರ್.ಸಿ.ಗೌಡರ, ರಮೇಶ ಕೋಳುರ, ಶೇಖರಯ್ಯ, ಮಂಜು ಹಾದಿಮನಿ, ಮಾರುತಿ, ಜೆಟ್ಟೆಪ್ಪ ಗೊಳಸಂಗಿ, ಗೌಡಪ್ಪ, ಅರುಣ ಇದ್ದರು.
ನಿರ್ಣಾಯಕರಾಗಿ ದೈಹಿಕ ಶಿಕ್ಷಕ ಅಬ್ದುಲ್ ಖಾದೀರ್ ಚೌದ್ರಿ ಕೆಲಸ ಮಾಡಿದರು. ನಿಂಗರಾಜ, ಅಮರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.