ಕಕ್ಕೇರಾ (ಯಾದಗಿರಿ ಜಿಲ್ಲೆ): ಪಟ್ಟಣದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ 95.4 ಎಂಎಂ ದಾಖಲೆ ಮಳೆಯಾಗಿದೆ.
ಭಾರೀ ಮಳೆಯಿಂದ ವಲಯದ ನಿಂಗಾಪುರ ಗ್ರಾಮದಲ್ಲಿ 6 ಮನೆಗಳು ಧರೆಗುರುಳಿವೆ. ಹುಣಸಿಹೊಳೆ ಗ್ರಾಮದಲ್ಲಿ 5 ಮನೆಗಳ ಪೈಕಿ 3 ಮನೆಗಳ ಗೋಡೆಗಳು ಧರೆಗುರುಳಿದರೆ, 2 ಮನೆಗಳ ಮೇಲ್ಛಾವಣಿ ನೆಲಕಪ್ಪಳಿಸಿವೆ.
ಸಮೀಪದ ಪೀರಗಾರದೊಡ್ಡಿಯ ಹಳ್ಳ ಸಂಪೂರ್ಣವಾಗಿ ತುಂಬಿ ಹರಿದ ಪರಿಣಾಮ ಸೇತುವೆ ಮೇಲೆ ರೈತರು ಹಾಗೂ ಸಾರ್ವಜನಿಕರು ನೀರಿನ ರಭಸ ಕಡಿಮೆಯಾಗುವರೆಗೂ ಸಂಚರಿಸಲಾಗಲಿಲ್ಲ. ಹಳ್ಳದ ಸಮೀಪದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳು ಜಲಾವೃತಗೊಂಡಿವೆ. ನೂರಾರು ಎಕರೆ ಭತ್ತದ ಬೆಳೆ ನೀರು ಪಾಲಾಗಿದೆ. ಸೇತುವೆ ತಡೆಗೋಡೆ ಒಡೆದಿದ್ದು, ಅಪಾಯದ ಸ್ಥಿತಿಯಲ್ಲಿದೆ.
‘ಪಟ್ಟಣ ವ್ಯಾಪ್ತಿಯಲ್ಲಿ 95.4 ದಾಖಲೆ ಮಳೆಯಾಗಿದ್ದು, ಮನೆಹಾನಿ ಹಾಗೂ ಜಮೀನುಗಳಲ್ಲಿ ನೀರು ನುಗ್ಗಿದೆ. ಸರ್ವೆ ಕಾರ್ಯ ಮಾಡುತ್ತಿದ್ದು, ಮೇಲಧಿಕಾರಿಗಳಿಗೆ ತಲುಪಿಸಲಾಗುವುದು’ ಎಂದು ಗ್ರಾಮ ಲೆಕ್ಕಾಧಿಕಾರಿ ಸಂತೋಷ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.