ಹುಣಸಗಿ (ಕೊಡೇಕಲ್ಲ ಬಸವೇಶ್ವರ ವೇದಿಕೆ): ‘ಈ ನಾಡಿನ ಮಹಿಳೆಯರು, ಶ್ರಮಿಕರ ನಿತ್ಯ ಜೀವನದಲ್ಲಿ ಸಾಹಿತ್ಯ ಹಾಸುಹೊಕ್ಕಾಗಿದೆ. ಇದು ಪರಸ್ಪರ ಒಗ್ಗೂಡಿಸುವ ಶಕ್ತಿ’ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಯಲದ ನಿರ್ದೇಶದಕ ಅಮರೇಶ ಯಾತಗಲ್ಲ ಅಭಿಪ್ರಾಯಪಟ್ಟರು.

ಪಟ್ಟಣದ ನೀಲಕಂಠೇಶ್ವರ ಮಹಾಮಂಟಪದ ಆವರಣದ ಕೊಡೇಕಲ್ಲ ಬಸವೇಶ್ವರ ಪ್ರಧಾನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿಗೆ ವಚನ ಸಾಹಿತ್ಯ ನೀಡಿದ, ಅಮರಗನ್ನಡ ಎಂಬ ಹೊಸ ಲಿಪಿಯನ್ನೇ ಕೊಡುಗೆಯಾಗಿ ಕೊಟ್ಟಿರುವ ಪುಣ್ಯಭೂಮಿಯಲ್ಲಿ ಜನಿಸಿರುವ ನಾವೆಲ್ಲರೂ ಧನ್ಯರು. ಇಲ್ಲಿನ ಮುದನೂರು, ಹಗರಟಗಿ ತವನಿಧಿಯಾಗಿರುವುದು ಇತಿಹಾಸ ಹೇಳುತ್ತದೆ. ಇಲ್ಲಿನ ಅಶೋಲಿಯನ್ ಸಂಸ್ಕೃತಿ ವಿಶ್ವ ಭೂಪಟದಲ್ಲಿ ಗೋಚರಿಸುವಂತೆ ಮಾಡಿದೆ. ಆ ಮೂಲಕ ಅ ವಿಷಯ ವಸ್ತುವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಕೆ. ಪದ್ದಯ್ಯ ಅವರಿಗೆ ಸಲ್ಲುತ್ತದೆ. ಅಂತಹ ಶ್ರೇಷ್ಠ ಸಂಶೋಧಕರು ಸಮ್ಮೇಳನಲ್ಲಿ ಭಾಗವಹಿಸಿರುವುದು ಹೆಚ್ಚು ಶಕ್ತಿ ತಂದಿದೆ’ ಎಂದರು.

‘ಸಾಹಿತ್ಯ ಎಂಬುದು ನಿಂತ ನೀರಲ್ಲ, ಅದು ನಿರಂತವಾಗಿ ಬೆಳಯಬೇಕು. ನಮ್ಮ ಭಾಷೆ ಉಳಿಯಬೇಕು. ಆದರೆ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಸುರಪುರದ ನಾಲ್ವಡಿ ವೆಂಕಟಪ್ಪ ನಾಯಕ ಆಡಳಿತ ನಡೆಸಿದ ಈ ನೆಲ 82 ಶಾಸನಗಳನ್ನು ಹೊಂದಿರುವದು ವಿಶೇಷ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೇಣಗೋಪಾಲನಾಯಕ ಮಾತನಾಡಿ, ‘ತಾಯಿ ಮತ್ತು ತಾಯಿ ಭಾಷೆಯನ್ನು ಯಾರು ಗೌರವಿಸುತ್ತಾರೋ ಅವರು ಅತ್ಯಂತ ಎತ್ತರಕ್ಕೆ ಬೆಳೆಯುತ್ತಾರೆ’ ಎಂದರು

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ‘ಈ ಹಿಂದೆ ವಿಕ್ರಮಪುರವೆಂದು ಕರೆಯಲಾಗುತ್ತಿದ್ದ ಹುಣಸಗಿ ಪಟ್ಟಣದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಯುವ ಸಾಹಿತಿಗಳಿಗೆ ಸೂಕ್ತ ವೇದಿಕೆ ಒದಗಿಸಿದೆ’ ಎಂದು ಹೇಳಿದರು.

ಸಮ್ಮೇಳದ ಸರ್ವಾಧ್ಯಕ್ಷರಾದ ವಿರೇಶ ಹಿರೇಮಠ ಹಳ್ಳೂರ ಮಾತನಾಡಿ, ‘ಹುಣಸಗಿಯ ಇತಿಹಾಸ ಪರಂಪರೆಯ ನಾಡಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿಮಾನದ ಸಂಗತಿ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ‘ಕನ್ನಡ ಭಾಷೆ, ನೆಲ,ಜಲ ಉಳಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮರಗನ್ನಡ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸುರಪುರದ ಬಲವಂತ ಬಹರಿ ಬಹದ್ದೂರ ಸಂಸ್ಥಾನದ ರಾಜರಾದ ರಾಜಾ ಕೃಷ್ಣಪ್ಪನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಜಿ.ಪಂ ಮಾಜಿ ಸದಸ್ಯರಾದ ನಾಗಣ್ಣ ಸಾಹು ದಂಡಿನ್, ಬಸವರಾಜಸ್ವಾಮಿ ಸ್ಥಾಠವರಮಠ, ಸಿದ್ದಣ್ಣ ಮಲಗಲದಿನ್ನಿ, ವಿರೇಶ ಚಿಂಚೋಳಿ, ರಾಜಶೇಖರಗೌಡ ಪಾಟೀಲ, ತಹಶೀಲ್ದಾರ್ ಎಂ. ಬಸವರಾಜ, ತಾ.ಪಂ ಇಒ ಬಸಣ್ಣ ನಾಯಕ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಗಣ್ಯರು ವೇದಿಕೆ ಮೇಲೆ ಇದ್ದರು.

ಅದ್ದೂರಿ ಮೆರವಣಿಗೆ

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಹಾಂತಸ್ವಾಮಿ ವೃತ್ತದಿಂದ ಸಮ್ಮೇಳನದ ಅಧ್ಯಕ್ಷ ವೀರೇಶ ಹಳ್ಳೂರ ಹಾಗೂ ಕಸಾಪದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಅವರಿದ್ದ ಅಲಂಕೃತ ರಥಕ್ಕೆ ಬಬಲುಗೌಡ ಚಾಲನೆ ನೀಡಿದರು. ಮಹಿಳೆಯ ಪೂರ್ಣಕುಂಭ ಕಳಸ ವಿವಿಧ ಕಲಾ ಕಂಡಗಳ ಕಲಾ ಪ್ರದರ್ಶನ ಡೊಳ್ಳು ಹಲಗೆ ವಾದನ ಲೇಜಿಮ್ ಕುಣಿತ ಗಮನ ಸೆಳೆಯಿತು. ದಾರಿಯುದ್ದಕ್ಕೂ ಕನ್ನಡದ ಘೂಷಣೆ ಮೊಳಗಿದವು. ವಿವಿಧ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಕನ್ನಡದ ಬಾವುಟಗಳೊಂದಿಗೆ ಗಮನ ಸೆಳೆದರು. ಮಾರ್ಗದಲ್ಲಿ ಅಭಿಮಾನಿಗಳು ಇಬ್ಬರಿಗೂ ಗೌರವಿಸಿದ್ದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.