ಸೋಮವಾರ, ಸೆಪ್ಟೆಂಬರ್ 27, 2021
28 °C

23ಕ್ಕೆ ಶಾಲೆ, ಕಾಲೇಜು ಆರಂಭಿಸಲು ಸಿದ್ಧತೆ; ಸಚಿವ ಬಿ.ಸಿ.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಮಕ್ಕಳ ಹಿತದೃಷ್ಟಿಯಿಂದ ಆಗಸ್ಟ್‌ 23ರಿಂದ ಪ್ರೌಢಶಾಲೆ ಮತ್ತು ಪಿಯು ನೇರ ತರಗತಿ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

‘ತರಗತಿಗಳ ಆರಂಭಿಸುವಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಲೆ ಆರಂಭವಾದ ಬಳಿಕ ಕೋವಿಡ್‌ ಹೆಚ್ಚಾದರೆ ಆಗಿನ ಪರಿಸ್ಥಿತಿ ನೋಡಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ಹೇಳಿದರು.

‘ಶೇ 2ರಷ್ಟು ಪಾಸಿಟಿವಿಟಿ ಕೆಳಗಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಮತ್ತು ಪಿಯು ಕಾಲೇಜು ತರಗತಿ ಆರಂಭಿಸಲಾಗುವುದು. ಶಿಕ್ಷಕರ ವರ್ಗಾವಣೆಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು’ ಎಂದರು.

ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಯೋಜನೆಗಳಿಗೆ ಯಾರೂ ತಮ್ಮ ಹೆಸರು ಇಟ್ಟುಕೊಳ್ಳಬಾರದು. ಸರ್ಕಾರದ ಹಣದಲ್ಲಿ ಯೋಜನೆ ಮತ್ತು ರಾಜಕಾರಣಿಗಳ ಹೆಸರು ಸರಿ ಹೊಂದುವುದಿಲ್ಲ. ಹೀಗಾಗಿ ಪ್ರಧಾನಿ ಅವರು ಹಲವು ಯೋಜನೆಗಳನ್ನು ಪ್ರಧಾನಮಂತ್ರಿ ಹೆಸರಿನಲ್ಲಿ ಘೋಷಿಸಿದ್ದಾರೆ. ದೇಶದ ಅಭಿವೃದ್ಧಿಗೆ ಒಂದೇ ಕುಟುಂಬ ಶ್ರಮಿಸಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು